ಕರಾವಳಿಗೆ ಮುಂಗಾರು ಪ್ರವೇಶ


29-05-2018 578

ಮಂಗಳೂರು: ಕರಾವಳಿಗೆ ಮುಂಗಾರು ಮಳೆ ಕಾಲಿಟ್ಟಿದೆ. ಇಂದು ಬೆಳಿಗ್ಗೆಯಿಂದ ಕರಾವಳಿಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಳೆ ಬಿರುಸುಗೊಂಡಿದೆ. ಒಮನ್ ನಲ್ಲಿನ ಚಂಡಮಾರುತದ ಪರಿಣಾಮವಾಗಿ ಕಳೆದೆರಡು ಮೂರು ದಿನಗಳಿಂದ ಕರಾವಳಿಯಲ್ಲಿ ರಾತ್ರಿ ವೇಳೆ ಗುಡುಗು-ಸಿಡಿಲು ಸಹಿತ ಭಾರೀ ಮಳೆ ಸುರಿಯುತ್ತಿತ್ತು. ಇದೀಗ ಹವಾಮಾನ ಇಲಾಖೆ ನೀಡಿದ ಮಾಹಿತಿ ಪ್ರಕಾರ ಮುಂಗಾರು ಮಳೆ ಇಂದಿನಿಂದ ಆರಂಭಗೊಂಡಿದೆ. ಮುಂಗಾರಿನ ನಿರೀಕ್ಷೆಯಲ್ಲಿದ್ದ ಕರಾವಳಿಗರಿಗೂ ಮಳೆಯ ಆಗಮನ ಖುಷಿ ತಂದಿದೆ. ಇನ್ನು ಮತ್ತೊಂದೆಡೆ ಮಳೆಯಿಂದಾಗೋ ಹಾನಿ‌ ಎದುರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಕೂಡಾ ಸಜ್ಜಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

monsoon Rain ಹವಾಮಾನ ಕರಾವಳಿ