ನಿಫಾ: ಬಾವಲಿಗಳ ಮಾರಣಹೋಮಕ್ಕೆ ಸಜ್ಜಾದ ಗ್ರಾಮ!


28-05-2018 469

ತುಮಕೂರು: ದೇಶದಾದ್ಯಂತ ಭಯ ಹುಟ್ಟಿಸುತ್ತಿರುವ ನಿಫಾ ವೈರಸ್ ನಿಂದ ಕೇರಳದಲ್ಲಿ ಅದಾಗಲೇ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಜನರು ಭಯ ಭೀತರಾಗಿದ್ದಾರೆ. ಕೇರಳ ಮತ್ತು ಕರ್ನಾಟಕ ಗಡಿಯ ಸುತ್ತ ಆರೋಗ್ಯಾಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಇನ್ನು ತುಮಕೂರಿನಲ್ಲಿ ನಿಫಾ ಜ್ವರದ ಭೀತಿಗೆ ಹೆದರಿದ ಗ್ರಾಮಸ್ಥರು, ಬಾವಲಿಗಳ ಮಾರಣ ಹೋಮಕ್ಕೆ ನಿರ್ಧರಿದ್ದಾರೆ. ಬಾವಲಿಗಳನ್ನು ಬಲೆ ಹಾಕಿ ಹಿಡಿದು ಸಾಯಿಸಿ ಮಣ್ಣಲ್ಲಿ ಹೂಳಲು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಗ್ರಾಮ ಪಂಚಾಯತಿ ನಿರ್ಧಾರ ತೆಗೆದುಕೊಂಡಿದೆ. ಎರಡು ದಿನಗಳ ಹಿಂದಷ್ಟೇ ನಡೆದ ಗ್ರಾಮ ಸಭೆಯಲ್ಲಿ, ಹುಳಿಯಾರು ಗ್ರಾಮದ ಮರಗಳಲ್ಲಿ ವಾಸವಾಗಿರುವ ಬಾವಲಿಗಳನ್ನು ಬಲೆಗೆ ಕೆಡೆವಿ, ಸಾಯಿಸಲು ಗ್ರಾಮ ಪಂಚಾಯತಿ ಸದಸ್ಯರು ಸರ್ವಾನುಮತದಿಂದ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

bats Nipah virus ಬಾವಲಿ ಗ್ರಾಮ ಪಂಚಾಯತಿ