‘ರೈತರಿಗೆ ಸಿಎಂ ಕುಮಾರಸ್ವಾಮಿ ಮೋಸಮಾಡಿದ್ದಾರೆ’-ರಾಮದಾಸ್


28-05-2018 406

ಮೈಸೂರು: ರೈತರ ಸಾಲಮನ್ನಾಗೆ ಆಗ್ರಹಿಸಿ, ಬಿಜೆಪಿ ಮುಖಂಡರು ಹಲವೆಡೆ ಬಂದ್ ನಡೆಸಿ ಪ್ರತಿಭಟಿಸಿದ್ದಾರೆ. ಮೈಸೂರು ಬಸ್ ನಿಲ್ದಾಣದಲ್ಲಿ ಬಸ್ ತಡೆಯಲು ಮುಂದಾದ ಶಾಸಕ ನಾಗೇಂದ್ರ, ರಾಮದಾಸ್ ಸೇರಿದಂತೆ 20ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆಗೊಳಿಸಿದ್ದಾರೆ.

ಇನ್ನು ಪೊಲೀಸರು ವಶಕ್ಕೆ ಪಡೆಯುವ ಮುನ್ನ ಶಾಸಕ ರಾಮದಾಸ್ ಮಾತನಾಡಿ, ‘ನಮ್ಮನ್ನ ಬಂಧಿಸಿ ವಾಪಾಸ್ ಬಿಡುಗಡೆ ಮಾಡಿದರು ಬಸ್ ತಡೆಯುತ್ತೇವೆ’, ಎಂದು ಆಕ್ರೋಶದಿಂದ ನುಡಿದ್ದಾರೆ. ರೈತರು ಈಗಾಗಲೇ ನೊಂದು ಸಾಕಾಗಿ ಹೋಗಿದೆ. ಹಾಗಾಗಿ ಅವರ ಪರವಾಗಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ. ಇದನ್ನು ಹತ್ತಿಕ್ಕುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ. ಆದರೆ, ನಾವು ಕಲ್ಲು ಹೊಡೆದಿಲ್ಲ, ಟೈರ್‌ಗಳಿಗೆ ಬೆಂಕಿಯೂ ಹಚ್ಚಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

'ಕುಮಾರಸ್ವಾಮಿ ಸಾಲಮನ್ನಾ ಮಾಡುತ್ತೇವೆಂದು ರೈತರಿಗೆ ಮೋಸ ಮಾಡಿದ್ದಾರೆ' ಎಂದು ರಾಮದಾಸ್ ಆರೋಪಿಸಿದರು. ಅವರೇ ಮಾಡಲಿ ಅಥವಾ ನಮ್ಮ ಸರ್ಕಾರ ಬಂದ ಕೂಡಲೇ ಮಾಡುತ್ತೇವೆ, ಒಟ್ಟಾರೆ ರೈತರ ಕಣ್ಣೀರು ಒರೆಸುವ ಕೆಲಸವಾಗಬೇಕಿದೆ ಎಂದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

protest Farmers ಕುಮಾರಸ್ವಾಮಿ ಕಣ್ಣೀರು