ಗದಗ: ನಿಫಾ ವೈರಸ್ ಇಲ್ಲ ಎಂದ ಜಿಮ್ಸ್


26-05-2018 493

ಗದಗ: ಜಿಲ್ಲೆಯ ರೋಣ ತಾಲ್ಲೂಕಿನ ವ್ಯಕ್ತಿಗೆ ನಿಫಾ ವೈರಸ್ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿ, ಜಿಮ್ಸ್ ಗೆ ದಾಖಲಿಸಲಾಗಿ ವಿಶೇಷ ಘಟಕದಲ್ಲಿ ಚಿಕೆತ್ಸೆ ನೀಡಲಾಗುತ್ತಿದೆ. ಕಳೆದ 6 ತಿಂಗಳಿನಿಂದ ಕೇರಳದಲ್ಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿಗೆ ಏಕಾಏಕಿ ಕೆಮ್ಮು, ಜ್ವರ ಕಾಣಿಸಿಕೊಂಡಿತ್ತು. ನಿಫಾ ವೈರಸ್ ಇರುವ ಬಗ್ಗೆ ಶಂಕಿಸಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದೆರ, ಇದೀಗ ಕುಟುಂಬ ನೆಮ್ಮದಿಯ ನಿಟ್ಟುಸಿ ಬಿಡುವಂತಾಗಿದೆ. ಇದೇ ತಿಂಗಳ ಮೇ 24ರಂದು ಶಂಕಿತ ನಿಫಾ ವೈರಸ್ ಹೊಂದಿರುವುದಾಗಿ ಶಂಕಿಸಿ ವ್ಯಕ್ತಿಯ ರಕ್ತ ಮಾದರಿಯನ್ನು ಪರೀಕ್ಷೆಗೆಂದು ಪುಣೆಯ ‌ಲ್ಯಾಬ್ ಕಳುಹಿಸಲಾಗಿತ್ತು. ಇದೀಗ ಪುಣೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್ ವರದಿ ನೀಡಿದ್ದು, ನಿಫಾ ವೈರಸ್ ಇಲ್ಲ ಎಂದು ವರದಿಯಲ್ಲಿ ತಿಳಿಸಿದೆ. ನಿಫಾ ವೈರಸ್ ಇಲ್ಲದಿರೋ ಬಗ್ಗೆ ವರದಿ‌ ನೀಡಿರುವುದಾಗಿ ಜಿಮ್ಸ್ ನಿರ್ದೇಶಕ ಪಿ.ಎಸ್ ಭೂಸರೆಡ್ಡಿ ಮಾಹಿತಿ ನೀಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

nipah virus GIMS ರೋಣ ಕೆಮ್ಮು, ಜ್ವರ