ಮತ್ತೊಮ್ಮೆ ಪಕೋಡ ಮಾರಿ ಕೇಂದ್ರದ ವಿರುದ್ಧ ಪ್ರತಿಭಟನೆ


26-05-2018 532

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಕೇಂದ್ರ ಬಿಜೆಪಿ ಸರ್ಕಾರ 4ವರ್ಷ ಪೂರೈಸಿದ ಹಿನ್ನೆಲೆ, ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ, ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಮಿಟಿ ವಿನೂತನ ಪ್ರತಿಭಟನೆ ನಡೆಸಿದೆ. ನಗರದ ಮೌರ್ಯ ಸರ್ಕಲ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಖಕ್ಕೆ ಮೋದಿ ಮುಖವಾಡ ಧರಿಸಿ, ಪಕೋಡ ಮಾರುವ ಮೂಲಕ ಉದ್ಯೋಗ ಸೃಷ್ಟಿ ಭರವಸೆ ಈಡೇರಿಸದ ಕೇಂದ್ರ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭ್ರಷ್ಟಾಚಾರ ಹಾಗೂ ಜನರ ಹಣ ಲೂಟಿ ಮಾಡಿದ ಭ್ರಷ್ಟರಿಗೆ ಕೇಂದ್ರ ಸರ್ಕಾರ ರಕ್ಷಣೆ ನೀಡಿದೆ. ವಿದೇಶಕ್ಕೆ ಫಲಾಯನ ಮಾಡಿರುವ ನೀರವ್ ಮೋದಿ ಮತ್ತು ವಿಜಯ್ ಮಲ್ಯರನ್ನ ಕೇಂದ್ರ ಸರ್ಕಾರ ಯಾಕೆ ಬಂಧಿಸಲಿಲ್ಲ..? ಕಪ್ಪು ಹಣ ದೇಶಕ್ಕೆ ವಾಪಸ್ಸು ತರುತ್ತೇವೆ ಎಂದು ದೇಶದ ಜನರಿಗೆ ಪ್ರಧಾನಿ ಮೋದಿ ಸುಳ್ಳು ಭರವಸೆ ನೀಡಿದ್ದಾರೆ. ನೋಟ್ ಬ್ಯಾನ್ ನಿಂದ ದೇಶದ ಜನರಿಗೆ ಆದ ನಷ್ಟದ ಬಗ್ಗೆ ಪ್ರಧಾನಿ ಸ್ಪಷ್ಟ ಉತ್ತರ ನೀಡಿಲ್ಲ. ವಿದ್ಯಾರ್ಥಿಗಳಿಗೆ ಪಕೋಡ ವ್ಯಾಪಾರ ಮಾಡಿ ಎಂಬ ಹೇಳಿಕೆ ಮೂಲಕ ದೇಶದ ವಿದ್ಯಾರ್ಥಿಗಳನ್ನ ನಿರುದ್ಯೋಗಿಗಳನ್ನಾಗಿಸಿದ್ದಾರೆ. ದೇಶದ ಇತಿಹಾಸದಲ್ಲೇ ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಇದಕ್ಕೆಲ್ಲಾ ಕಾರಣ ಪ್ರಧಾನಿ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದಾರೆ. 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Black money demonetisation ಪೆಟ್ರೋಲ್ ವಿದ್ಯಾರ್ಥಿ