ನಿಫಾ ಶಂಕೆ: ವ್ಯಕ್ತಿ ಜಿಮ್ಸ್ ಗೆ ದಾಖಲು!


24-05-2018 502

ಗದಗ: ಜಿಲ್ಲೆಯಲ್ಲಿ ಶಂಕಿತ ನಿಫಾ ವೈರಸ್ ಪತ್ತೆ ಹಿನ್ನೆಲೆ, ಶಂಕಿತ ವ್ಯಕ್ತಿಗೆ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಜಿಮ್ಸ್) ವಿಶೇಷ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರೋಣ ತಾಲ್ಲೂಕಿನ ವ್ಯಕ್ತಿಯೊಬ್ಬರಲ್ಲಿ ನಿಫಾ ವೈರಸ್ ಇರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಈ ವ್ಯಕ್ತಿ ಕೆಮ್ಮಿನಿಂದ ಬಳಲಲುತ್ತಿದ್ದಾರೆ. ಶಂಕಿತ ನಿಫಾ ವೈರಸ್ ಇರುವ ವ್ಯಕ್ತಿಯ ರಕ್ತ ಮಾದರಿಯನ್ನು ಪುಣೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ನಾಳೆ ಸಂಜೆಯೊಳಗೆ ವರದಿ ಬರುವ ಸಾಧ್ಯತೆ ಇದೆ ಎಂದು, ಜಿಮ್ಸ್ ನಿರ್ದೇಶಕರು ತಿಳಿಸಿದ್ದಾರೆ.

ವರದಿ ಬಂದ ನಂತರ ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಲಾಗುವುದು, ಸಾರ್ವಜನಿಕರು ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ ಜಿಮ್ಸ್ ನಿರ್ದೇಶಕ ಪಿ.ಎಸ್.ಭೂಸರಡ್ಡಿ. ಪಕ್ಷಿ ಕಚ್ಚಿದ ಹಣ್ಣನ್ನು ತಿನ್ನುವಂತಿಲ್ಲ, ಯಾವುದೇ ತರಕಾರಿ, ಹಣ್ಣುಗಳನ್ನು ಶುಚಿಗೊಳಿಸಿ ತಿನ್ನಬೇಕು, ಕಾಯಿಲೆ ಲಕ್ಷಣ ಕಂಡು ಬಂದಲ್ಲಿ ಮುಂಜಾಗ್ರತ ಕ್ರಮವಾಗಿ ಆಸ್ಪತ್ರೆಗೆ ಭೇಟಿ ನೀಡಿ ಎಂದು ಸೂಚಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Nifa GIMS ಆಸ್ಪತ್ರೆ ಅವಶ್ಯಕತೆ