ವದಂತಿಗೆ ಕಿವಿಗೊಟ್ಟು ಮಾನಸಿಕ ಅಸ್ವಸ್ಥೆ ಮೇಲೆ ಹಲ್ಲೆ


24-05-2018 424

ಬೆಂಗಳೂರು: ಮಕ್ಕಳ ಕಳ್ಳ ಎಂದು ಶಂಕಿಸಿ ವ್ಯಕ್ತಿಯೊಬ್ಬನನ್ನು ಥಳಿಸಿ ರಾಜಸ್ಥಾನ ಮೂಲದ ಯುವಕನೊಬ್ಬನನ್ನು ಕೊಲೆ ಗೈದ ಬೆನ್ನಲ್ಲೇ, ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರನ್ನು ಕಳ್ಳಿಯೆಂದು ಭಾವಿಸಿ ಸಾರ್ವಜನಿಕರು ಥಳಿಸಿ ಶ್ರೀರಾಮಪುರ ಪೊಲೀಸರಿಗೆ ಒಪ್ಪಿಸಿರುವ ಘಟನೆ ಗುರುವಾರ ನಡೆದಿದೆ.

ಮಕ್ಕಳಿಗೆ ಚಾಕೊಲೇಟ್ ಕೊಟ್ಟು ಅವರನ್ನು ಕದೊಯ್ಯಲು ಮಹಿಳೆ ಬಂದಿದ್ದಳು ಎಂದು ಅನುಮಾನಿಸಿ ಶ್ರೀರಾಂಪುರದ ಜನ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಆದರೆ, ವಿಚಾರಣೆ ವೇಳೆ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಗೊತ್ತಾಗಿದ್ದು, ಮಕ್ಕಳ ಕದಿಯಲು ಬಂದಿರಲಿಲ್ಲ ಎನ್ನಲಾಗಿದೆ. ಹಲ್ಲೆಯಿಂದ ಗಾಯಗೊಂಡಿರುವ ಮಹಿಳೆಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸುಳ್ಳು ಸುದ್ದಿ, ವದಂತಿಗಳಿಂದ ಸಾರ್ವಜನಿಕರು ರೊಚ್ಚಿಗೆದ್ದು ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆ ನಡೆಯುತ್ತಿದ್ದಂತೆ ಶ್ರೀರಾಂಪುರದಲ್ಲಿ ಸಾವಿರಾರು ಜನ ಬೀದಿಗಿಳಿದು ಪೊಲೀಸರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆಗಿಳಿದಿದ್ದರು. ಯಾವ ಮಕ್ಕಳ ಕಳ್ಳರೂ ಬೆಂಗಳೂರಿಗೆ ಬಂದಿಲ್ಲ ಎಂದು ಪೊಲೀಸರು ಸಾರ್ವಜನಿಕರನ್ನು ಮನವೊಲಿಸಲು ಹರಸಾಹಸ ಪಟ್ಟಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Attack Rumor ಅಸ್ವಸ್ಥೆ ಶ್ರೀರಾಂಪುರ