‘ತೃತೀಯ ರಂಗ ಮಳೆಗಾಲದಲ್ಲಿ ‌ಅಣಬೆ ಇದ್ದಂತೆ’- ಶ್ರೀರಾಮುಲು


24-05-2018 543

ಬಳ್ಳಾರಿ: ನಿನ್ನೆ ವಿವಿಧ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ಮುಖಂಡರು ಹೆಚ್.ಡಿ ಕುಮಾರಸ್ವಾಮಿ ಅವರ ಪ್ರಮಾಣ ವಚನ ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದರು. ವೇದಿಕೆಯಲ್ಲಿ ಸೇರಿದ ವಿವಿಧ ನಾಯಕರುಗಳ ಸಮಾಗಮ ತೃತೀಯ ರಂಗದ ಚರ್ಚೆಯನ್ನು ಹುಟ್ಟುಹಾಕಿತ್ತು. ಈ ಕುರಿತು ಹಲವು ರಾಜಕೀಯ ನಾಯಕರು ಪ್ರತಿಕ್ರಿಯಿಸಿದ್ದಾರೆ.

ಇನ್ನು ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಶಾಸಕ ಶ್ರೀರಾಮುಲು, ಕುಮಾರಸ್ವಾಮಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ವಿವಿಧ ‌ನಾಯಕರು ಬಂದಿದ್ದರು. ಇದು ತೃತೀಯ ರಂಗದ ವೇದಿಕೆ ಎಂದು ಹೇಳುತ್ತಿದ್ದಾರೆ, ಆದರೆ ಇದು ಕಾಂಗ್ರೆಸ್ ಅವನತಿಯ ಮೊದಲ ಮೆಟ್ಟಿಲು, ತೃತೀಯ ರಂಗದಲ್ಲಿ ಕಾಂಗ್ರೆಸ್ ಬೇರೆ ಎಂದು‌ ಮಮತಾ ಬ್ಯಾನರ್ಜಿ ಹೇಳಿದ್ದಾರೆ, ತೃತೀಯ ರಂಗ ಕಟ್ಟಲು‌‌ ಹೊರಟಿದ್ದಾರೆ‌ಯೇ‌ ಹೊರತು ಯುಪಿಎ ಒಗ್ಗಟ್ಟು ಅಲ್ಲ ಎಂದರು.

ಮೋದಿ ಹೋರಾಟ ನಿಲ್ಲಿಸಬೇಕೆಂದು ಎಲ್ಲರೂ ಒಂದಾಗಿದ್ದಾರೆ. ಆದರೆ ತೃತೀಯ ರಂಗ ಕಾಂಗ್ರೆಸ್ ವಿರುದ್ಧ ಇದೆ. ಪ್ರಾದೇಶಿಕ ‌ಹಿತಾಸಕ್ತಿಗಾಗಿ ಹೋರಾಟವಿದು, ಮಳೆಗಾಲದಲ್ಲಿ ‌ಅಣಬೆ ಹುಟ್ಟಿದಂತೆ ತೃತೀಯ ರಂಗ ಹುಟ್ಟಿದೆ, ಅದಕ್ಕೆ ಆಯಸ್ಸು ಹೆಚ್ಚು ಇರಲ್ಲ, ಚುನಾವಣೆ ಸಂದರ್ಭದಲ್ಲಿ ಮಾತ್ರ ತೃತೀಯ ರಂಗ ಹುಟ್ಟಿಕೊಳ್ಳುತ್ತದೆ ಎಂದು ಲೇವಡಿ ಮಾಡಿದ್ದಾರೆ.

ನಿನ್ನೆ ಬಂದವರೆಲ್ಲ ಸ್ವಾರ್ಥಕ್ಕಾಗಿ ಬಂದಿದ್ದಾರೆ, ಬದ್ಧತೆ ಇಲ್ಲದ ತೃತೀಯ ರಂಗವಿದು. ಪ್ರಧಾನಿ ಪ್ರಮಾಣ ವಚನದ ವೇಳೆ 13 ದೇಶದ ಪ್ರಧಾನಿಗಳು ಬಂದಿದ್ದರು. ಅದೇ ರೀತಿ ‌ಮೋದಿ ವಿರೋಧಿಗಳೆಲ್ಲ ಬಣ ಸೇರಿಸಿದ್ದಾರೆ, ಮೋದಿ ಕೈಯಲ್ಲಿ ಸೋತವರು ಇಲ್ಲಿಗೆ ಬಂದಿದ್ದಾರೆ, ತೃತೀಯ ರಂಗಕ್ಕೆ ದಿಕ್ಕುದಿಸೆ ಇಲ್ಲ ಎಂದರು.

ಕುಮಾರಸ್ವಾಮಿಗೆ ನೈತಿಕತೆ ಇದ್ದರೆ ಮೊದಲು ಸಾಲಮನ್ನಾ ಮಾಡಲಿ. ಇದೀಗ ಯೂಟರ್ನ್ ಹೋಡೆಯುತ್ತಿದ್ದಾರೆ, ಪೂರ್ಣ ಬಹುಮತ ಇಲ್ಲವೆಂದು ನಾಟಕವಾಡುತಿದ್ದಾರೆ. ಬದ್ಧತೆ ಇಲ್ಲದ ನಾಯಕ ಕುಮಾರ ಸ್ವಾಮಿ, ಪ್ರಣಾಳಿಕೆಯಲ್ಲಿ‌ ಹೇಳಿದಂತೆ ನಡೆದುಕೊಳ್ಳಲಿ, ಸಾಲಮನ್ನಾ ಮಾಡಲೇಬೇಕು, ಕಾಂಗ್ರೆಸ್ ಮನವೊಲಿಸಲಿ ಬಿಡಲಿ ಗೊತ್ತಿಲ್ಲ, ಸಾಲಮನ್ನಾ ಮಾಡಲಿ, ಸಾಲಮನ್ನಾ ಮಾಡದೇ ಇದ್ದರೆ ಕುರ್ಚಿ ಬಿಟ್ಟು ತೊಲಗಿ ಎಂದು ಆಗ್ರಹಿಸಿದರು. 

ಎಲ್ಲರೂ ಸೇರಿರುವುದರಿಂದ ನಮಗೆ ಭಯವಿಲ್ಲ, ಎಲ್ಲರೂ ಮೋದಿ‌ಕೈಯಲ್ಲಿ ಸೋತವರು, ನಾವು ಯಾವ ಶಾಸಕರ ಜೊತೆಗೂ ಮಾತನಾಡಲ್ಲ, ಏನಾದರೂ ಮಾಡಲಿ ಯಾರ ತಂಟೆಗೂ ನಾವು ಹೋಗಲ್ಲ, ಬಹುಮತ ಸಾಬೀತು ಮಾಡಲಾಗಲಿಲ್ಲ, ಬಹುಮತ ಸಿಗುವ ವಿಶ್ವಾವಿತ್ತು. ಆದರೆ, ನಾವು‌ ಹಿಂದೂತ್ವವಾದಿಗಳು ಅದರಿಂದ ‌ಸೋಲಾಗಿದೆ ಅನ್ನೋದು ‌ಒಪ್ಪಲ್ಲ. ನನ್ನ ಆಡಿಯೋ ಬೋಗಸ್, ಇದೆಲ್ಲ ಕ್ರಿಯೇಟ್ ಮಾಡಲಾಗಿದೆ ಎಂದು ದೂರಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

B. Sriramulu third front ಸಾಲಮನ್ನಾ ಮುಖ್ಯಮಂತ್ರಿ