ಸಮ್ಮಿಶ್ರ ಸರ್ಕಾರ: 'ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು'-ದತ್ತಾ


24-05-2018 577

ಚಿಕ್ಕಮಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷ ಮತ್ತಷ್ಟು ಸಂಘಟನೆಯಾಗಬೇಕಿದೆ ಎಂದು ಜೆಡಿಎಸ್ ನ ಕಡೂರು ಮಾಜಿ ಶಾಸಕ ವೈ.ಎಸ್.ವಿ ದತ್ತಾ ಹೇಳಿದ್ದಾರೆ. ಪಕ್ಷ ಸಂಘಟನೆ ದೃಷ್ಟಿಯಿಂದ ಗೆದ್ದಿರುವ ಹಾಗು ಸೋತಂಥಹ ಅಭ್ಯರ್ಥಿಗಳ ಜೊತೆ ದೇವೇಗೌಡರು ಸಭೆ ಮಾಡಲಿದ್ದಾರೆ. ಮಂತ್ರಿಮಂಡಲ‌ ರಚನೆ ಬಳಿಕ ಸಭೆ ನಡೆಯಲಿದೆ ಎಂದು ತಿಳಿಸಿದರು.

ಸಮ್ಮಿಶ್ರ ಸರ್ಕಾರವಾಗಿರುವುದರಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಸೂಕ್ಷ್ಮ‌ಪರಿಸ್ಥಿತಿ ಇದೆ ಎಂದು ಎಚ್ಚರಿಸಿದ್ದಾರೆ. ಮಂತ್ರಿಗಿರಿಗೆ ಲಾಬಿ ವಿಚಾರವಾಗಿ ಮಾತನಾಡಿ, ಸೋತವರೆಲ್ಲ ಎಂಎಲ್ಸಿ ಸ್ಥಾನ ಕೊಡಿ ಅದುಕೊಡಿ, ಇದುಕೊಡಿ ಅನ್ನೋದು ಸರಿಯಲ್ಲ. ನಾನಂತೂ ಯಾವುದೇ ಬೇಡಿಕೆ ಇಡಲ್ಲ, ಅದು ಸರಿಯೂ ಅಲ್ಲ ಎಂದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

y.s.v datta Cabinet ಮಂತ್ರಿಗಿರಿ ಬೇಡಿಕೆ