ಎರಡೂವರೆ ವರ್ಷದ ಮಗು ದಾರುಣ ಸಾವು


23-05-2018 690

ಬೆಂಗಳೂರು: ಯಶವಂತಪುರದ ಆರ್ಎಂಸಿ ಯಾರ್ಡ್‍ನ ಆಶ್ರಯನಗರದಲ್ಲಿ ರಾಜ್ಯ ಮೀಸಲು ಪಡೆ (ಕೆಎಸ್‍ಆರ್‍ಪಿ) ವ್ಯಾನ್ ಹರಿದು ಎರಡೂವರೆ ವರ್ಷದ ಮಗು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮೃತಪಟ್ಟ ಮಗುವನ್ನು ಆಶ್ರಯನಗರದ ವಿಕ್ಟರಿ ವೇಲು ಹಾಗೂ ಲತಾ ದಂಪತಿಯ ಎರಡೂವರೆ ವರ್ಷದ ಪುತ್ರ ಗಿರಿಪ್ರಕಾಶ್ ಎಂದು ಗುರುತಿಸಲಾಗಿದೆ.

ಮನೆಯಲ್ಲಿ ಹಠಮಾಡುತ್ತಿದ್ದ ಗಿರಿಪ್ರಕಾಶ್‍ನನ್ನು ಬೆಳಿಗ್ಗೆ 5.30ರ ವೇಳೆ ತಂದೆ ಹತ್ತಿರದ ಅಂಗಡಿ ತಿಂಡಿ ಕೊಡಿಸಲು ಕರೆದುಕೊಂಡು ಹೋಗಿದ್ದರು. ತಿಂಡಿ ತೆಗೆದು ಕೊಂಡ ಮಗು ತಂದೆ ಅಂಗಡಿಯವನಿಗೆ ಹಣ ಕೊಡುವಷ್ಟರಲ್ಲಿ ರಸ್ತೆ ದಾಟಿ ಮನೆಗೆ ಓಡಲು ಮುಂದಾಗಿದೆ.

ಇದೇ ವೇಳೆ ರಾತ್ರಿಯಿಡೀ ನಿಂತಿದ್ದ ಕೆಎಸ್‍ಆರ್‍ಪಿ ವ್ಯಾನ್ ಚಲಿಸಿದ್ದು, ಅದರಡಿ ಸಿಕ್ಕಿ ಮಗು ಮೃತಪಟ್ಟಿದೆ. ಪ್ರಕರಣ ದಾಖಲಿಸಿರುವ ಯಶವಂತ ಸಂಚಾರ ಪೊಲೀಸರು ವ್ಯಾನ್ ಚಾಲಕನನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

child KSRP ಅಂಗಡಿ ವ್ಯಾನ್