ಮಾಧ್ಯಮದವರನ್ನು ನಿಂದಿಸಿದ ಸಂಸದ ಸಿದ್ದೇಶ್ವರ್!


23-05-2018 650

ದಾವಣಗೆರೆ: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರ ಸ್ವಾಮಿ ಇಂದು ಪ್ರಮಾಣ ವಚನ ಹಿನ್ನೆಲೆ ರಾಜ್ಯಾದ್ಯಂತ ಬಿಜೆಪಿ ವತಿಯಿಂದ ಪ್ರತಿಭಟನೆಗಳು ನಡೆದಿವೆ. ದಾವಣಗೆರೆ ಬಿಜೆಪಿಯಿಂದ ‘ಕರಾಳ ದಿನ’ ಆಚರಣೆಯಲ್ಲಿ ಸಂಸದ ಜಿ.ಎಂ ಸಿದ್ದೇಶ್ವರ್ ಸೇರಿದಂತೆ ಜಿಲ್ಲೆಯ ಬಿಜೆಪಿ ಮುಖಂಡರು ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮದವರನ್ನು ಜಿ.ಎಂ ಸಿದ್ದೇಶ್ವರ್ ನಿಂದಿಸಿದ ಘಟನೆ ನೆಡೆದಿರುವುದು ತಿಳಿದು ಬಂದಿದೆ. ಪ್ರತಿಭಟನೆ ವೇಳೆ 'ಕಾಮನ್ ಸೆನ್ಸ್ ಇಲ್ವಾ ಮಾಧ್ಯಮದವರಿಗೆ, ಮೀಡಿಯಾ ಅಂದರೆ ನಿಮಗೇನು ಕೊಂಬು ಬಂದಿದೆಯಾ' ಎಂದು ನಿಂದಿಸಿದ್ದಾರೆ. ಒಬ್ಬ ಸಂಸದರಾಗಿ, ಜನ ಸೇವಕರಾಗಿ ಮಾಧ್ಯಮದವರಿಗೆ ಈ ರೀತಿ ಮಾತಾನಾಡಬಹುದೇ, ಮಾಧ್ಯಮದವರನ್ನು ಸಿದ್ದೇಶ್ವರ್ ಕೀಳಾಗಿ ಕಂಡಿದ್ದಾರೆ, ಮೀಡಿಯಾದವರಿಗೆ ಕೊಂಬು ಬಂದಿದೆಯಾ ಅಂದ್ರೆ ಏನು ಅರ್ಥ ಸಂಸದರೇ? ಎಂದು ಸಿದ್ದೇಶ್ವರ್ ನಡೆಗೆ ವಿರೋಧ ವ್ಯಕ್ತವಾಗುತ್ತಿದೆ.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

G. M. Siddeshwara protest ಮೀಡಿಯಾ ಸಂಸದ