ಬಳ್ಳಾರಿ ತಾಲ್ಲೂಕು ಕಚೇರಿಗೆ ಮುತ್ತಿಗೆ ! ದನಕರುಗಳೊಂದಿಗೆ ಮೆರವಣಿಗೆ !


24-05-2017 644

ಬಳ್ಳಾರಿ: ಸಾಲ ಮನ್ನಾ ಮಾಡಿ. ಜಾನುವಾರುಗಳಿಗೆ ನೀರು ಮೇವು ಕೊಡಿ ಎಂದು ಜಿಲ್ಲೆಯ ಹಗರಿ ಬೊಮ್ಮನಹಳ್ಳಿಯಲ್ಲಿ ಬಿಜೆಪಿ ಹಿಂದುಳಿದ ಘಟಕದ ಕಾರ್ಯಕರ್ತರಿಂದ ಕುರಿ ದನಕರುಗಳೊಂದಿಗೆ ಪ್ರತಿಭಟನೆ ನಡೆಸಿ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಲಾಯಿತು. ಅಲ್ಲಿಂದ ಪಟ್ಟಣದ ಬಿಜೆಪಿ ಹಿಂದುಳಿದ ಘಟಕದ ಜಿಲ್ಲಾ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್ ನೇತೃತ್ವದಲ್ಲಿ, ಜನತೆ ಖಾಲಿ ಕೊಡಗಳನ್ನು ಹಿಡಿದು ದನಕರುಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಹಶೀಲ್ದಾರರ ಕಚೇರಿಗೆ ಮುತ್ತಿಗೆ ಹಾಕಿದರು.
ಜನತೆಗೆ ಕುಡಿಯಲು ನೀರು, ಹಾಗು ದನಕರುಗಳಿಗೆ ಮೇವಿಲ್ಲ ಎಂದು ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರದ ವಿರುದ್ದ ಘೋಷಣೆ ಕೂಗಿದರು. ತಾಲ್ಲೂಕು ಈವರೆಗೆ ಗೋಶಾಲೆ ತೆರೆದಿಲ್ಲ. ಅಗತ್ಯ ಮೇವು ದೊರೆತಿಲ್ಲ ಜಿಲ್ಲಾಡಳಿತ ರೈತರ ಸಂಕಷ್ಟಗಳಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಲಾಯಿತು. ಮಹಿಳೆಯರು ಖಾಲಿಕೊಡಗಳನ್ನು ಹಿಡಿದು ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು. ಕೂಡಲೇ ಅಗತ್ಯ ನೀರು ಮತ್ತು ಗೋಶಾಲೆ ವ್ಯವಸ್ಥೆ ಮಾಡಬೇಕು ಮತ್ತು ರೈತರ ಸಾಲ‌ಮನ್ನಾ ಮಾಡಬೇಕೆಂದು  ಆಗ್ರಹಿಸಿದರು.