‘ಆನೆ ಜೊತೆ ಪ್ರೀತಿ, ಓವೈಸಿ ಜೊತೆ ಡೇಟಿಂಗ್’- ಆರ್.ಅಶೋಕ್ ಲೇವಡಿ


23-05-2018 882

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ, ನಗರದ ಹಲವೆಡೆ ಜನಮತ ವಿರೋಧಿ ದಿನ ಆಚರಿಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ಮುಖಂಡ ಆರ್.ಅಶೋಕ್ ಮಾತನಾಡಿ, ‘ಯಾರು ತುರ್ತುಪರಿಸ್ಥಿತಿ ವಿರುದ್ಧ ಹೋರಾಡಿದ್ದರೋ ಅವರಿಗೆ ಇಂದು ಅವಮಾನ ಮಾಡುತ್ತಿದೆ ಈ ಮೈತ್ರಿ ಸರ್ಕಾರ. ಜಯಪ್ರಕಾಶ್ ನಾರಾಯಣ್, ಇಂದಿರಾ ಗಾಂಧಿ ವಿರುದ್ಧ ತುರ್ತುಸ್ಥಿತಿಯಲ್ಲಿ ಹೋರಾಡಿದ್ದರು. ಆದರೆ, ಇಂದು ಅವರ ಭಾವಚಿತ್ರವನ್ನು ಕಾಂಗ್ರೆಸ್ ತನ್ನ ಜಾಹೀರಾತಿನಲ್ಲಿ ಬಳಸಿಕೊಂಡಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡವರು ಯಾರೂ ಉದ್ಧಾರ ಆಗಿಲ್ಲ. ಧರ್ಮ ಸಿಂಗ್ ಮತ್ತು ನಮ್ಮ ಜೊತೆ ಮೈತ್ರಿ ಮಾಡಿಕೊಂಡು ಜೆಡಿಎಸ್ ಏನೆಲ್ಲಾ ಮಾಡಿತ್ತು ಅದು ಜನರಿಗೆ ಗೊತ್ತಿದೆ' ಎಂದರು. ಚುನಾವಣೆಗೂ ಮುನ್ನ ಜೆಡಿಎಸ್ ಆನೆಯನ್ನು ಪ್ರೀತಿ ಮಾಡಿತ್ತು. ಚುನಾವಣೆಯಲ್ಲಿ ಓವೈಸಿಯ ಜೊತೆ ಡೇಟಿಂಗ್ ಮಾಡಿತ್ತು ಎಂದು ಲೇವಡಿ ಮಾಡಿದ್ದಾರೆ.


ಒಂದು ಕಮೆಂಟನ್ನು ಬಿಡಿ