ಹೆಚ್ಡಿಕೆಯಿಂದ ಜಾತ್ಯತೀತ ಪದ ಬಳಕೆಗೆ ಬಿಜೆಪಿ ಕಾರ್ಯಕರ್ತನ ಆಕ್ಷೇಪ!


23-05-2018 604

ಮಂಡ್ಯ: ಇನ್ನೇನು ಕೆಲವೇ ಗಂಟೆಗಳಲ್ಲಿ ಹೆಚ್.ಡಿ ಕುಮಾರ ಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕೆ ವಿಧಾನಸೌಧದ ಮುಂಭಾಗ ಎಲ್ಲವೂ ಸಿದ್ಧಗೊಂಡಿದೆ. ಒಂದೆಡೆ ಕಾಂಗ್ರೆಸ್-ಜೆಡಿಎಸ್ ನದ್ದು ಅಪವಿತ್ರ ಮೈತ್ರಿ ಎಂದು ವಿರೋಧಿಸುತ್ತಿರುವ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟಿಸುತ್ತಿದೆ. ಇದರ ಬೆನ್ನಲ್ಲೇ ಕುಮಾರಸ್ವಾಮಿ ಸಿಎಂ ಆಗುವ ವೇಳೆ ಪ್ರಮಾಣ ವಚನದಲ್ಲಿ ಜ್ಯಾತ್ಯತೀತ ಪದ ಬಳಕೆಗೆ ಆಕ್ಷೇಪ ವ್ಯಕ್ತವಾಗಿದೆ.

ಪ್ರಮಾಣ ವಚನದ ವೇಳೆ ಜಾತ್ಯತೀತ ಪದ ಬಳಸದಂತೆ ರಾಜ್ಯಪಾಲರಿಗೆ ಮಂಡ್ಯದ ಬಿಜೆಪಿ ಕಾರ್ಯಕರ್ತ ಮಂಜುನಾಥ್ ಎಂಬುವವರು ದೂರು ನೀಡಿದ್ದಾರೆ. ಇ-ಮೇಲ್ ಮೂಲಕ ನೀಡಿರುವ ತಮ್ಮ ದೂರಲ್ಲಿ, ಅಸಾದುದ್ದೀನ್ ಓವೈಸಿ ಜೊತೆ ಕೈ ಜೋಡಿಸಿ ಜೆಡಿಎಸ್ ಪಕ್ಷ ಕೋಮುವಾದಿಯಾಗಿದೆ ಎಂದು ಆರೋಪಿಸಿದ್ದಾರೆ. ಜೆಡಿಎಸ್ ಪಕ್ಷ ಜ್ಯಾತ್ಯತೀತ ಪಕ್ಷವಾಗಿರದೇ ಅಧಿಕಾರಕ್ಕಾಗಿ ಮುಸ್ಲಿಂ ಕೋಮುವಾದಿ ಪಕ್ಷದ ಜೊತೆ ಕೈ ಜೋಡಿಸಿ ಕೋಮುವಾದಿಯಾಗಿದೆ. ಪ್ರಮಾಣ ವಚನದಲ್ಲಿ ಕುಮಾರ ಸ್ವಾಮಿ ಜ್ಯಾತ್ಯತೀತ ಪದ ಬಳಕೆಗೆ ಅವಕಾಶ ನೀಡಿದರೆ ತೀವ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

secular H.D.Kumaraswamy ಜಾತ್ಯತೀತ ರಾಜ್ಯಪಾಲ