ನಡುರಸ್ತೆಯಲ್ಲಿ ಬೀದಿ ಕಾಮಣ್ಣರ ಉಪಟಳ


22-05-2018 445

ಬೆಂಗಳೂರು: ನಗರದಲ್ಲಿ ಬೀದಿ ಕಾಮಣ್ಣರ ಉಪಟಳ ಮುಂದುವರೆದಿದ್ದು, ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಸ್ನೇಹಿತನೊಂದಿಗೆ ನಡೆದುಕೊಂಡು ಹೋಗುತ್ತಿದ್ದ  ಮಹಿಳಾ ಸಾಫ್ಟ್ ವೇರ್ ಎಂಜಿನಿಯರ್  ಒಬ್ಬರನ್ನು ಅಡ್ಡಗಟ್ಟಿದ ಕಾಮುಕರು ಅಸಭ್ಯವಾಗಿ ವರ್ತಿಸಿರುವ ಹೀನ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಮೇ 6ರಂದು ನಡೆದಿರುವ ಈ ಕೃತ್ಯವು ತಡವಾಗಿ ಬೆಳಕಿಗೆ ಬಂದಿದೆ. ಮಹಿಳಾ ಸಾಫ್ಟ್ ವೇರ್ ಎಂಜಿನಿಯರ್ ಜೊತೆ ಅಸಭ್ಯವಾಗಿ ವರ್ತಿಸಿರುವ ಕಾಮುಕರು ಪ್ರತಿರೋಧ ತೋರಿದ ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದಾರೆ.

ಸಂತ್ರಸ್ಥೆಯು ತನ್ನ ಸ್ನೇಹಿತನೊಂದಿಗೆ ದೂರು ದಾಖಲಿಸಲು ಹೋದಾಗ ಜೀವನ್ ಭೀಮಾನಗರ ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ. ಚುನಾವಣೆ ನೆಪ ಹೇಳಿ ದೂರು ದಾಖಲಿಸಿಕೊಂಡಿರಲಿಲ್ಲ ಎನ್ನಲಾಗಿದೆ. ನಂತರ ಈ ಘಟನೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ ಮೇಲೆ ಪೊಲೀಸರು ಮೇ 16ರಂದು ದೂರು ದಾಖಲಿಸಿಕೊಂಡು ಕಾಮುಕರಿಗಾಗಿ ಬಲೆ ಬೀಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Harrasement Road Romeo ಎಂಜಿನಿಯರ್  ಕಾಮುಕ