ಹೆಚ್ಡಿಕೆ ಪ್ರಮಾಣವಚನದಲ್ಲಿ ಭಾಗವಹಿಸದಂತೆ ಬಿಜೆಪಿ ಶಾಸಕರಿಗೆ ಸೂಚನೆ?


22-05-2018 564

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶದ ದಿನದಿಂದ ರಾಜಕೀಯ ಮೇಲಾಟಗಳು, ಹೈಡ್ರಾಮಾ, ತಂತ್ರ-ಪ್ರತಿ ತಂತ್ರಗಳು ನಡೆಯುತ್ತಲೇ ಇವೆ. ಇದರ ಬೆನ್ನಲ್ಲೇ ನಾಳೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಈಗಾಗಲೇ ಭರದ ಸಿದ್ಧತೆಗಳು ನಡೆಯುತ್ತಿವೆ. ಆದರೆ, ನಾಳಿನ ಹೆಚ್ಡಿಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಿಜೆಪಿ ನಾಯಕರು ಹೋಗದಂತೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ. ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ, ‘ಯಾರೊಬ್ಬರು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹೋಗಬೇಡಿ, ಸದ್ಯಕ್ಕೆ ತಟಸ್ಥವಾಗಿದ್ದುಕೊಂಡು ಎಲ್ಲವನ್ನು ನೋಡುತ್ತಿರಿ’ ಎಂದಿರುವ ಹೈಕಮಾಂಡ್ ಸೂಚನೆಯನ್ನು ಬಿಜೆಪಿ ಶಾಸಕರಿಗೆ ಬಿಎಸ್ ವೈ ರವಾನಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

High command yeddyurappa ರಾಜಕೀಯ ಪ್ರಮಾಣ ವಚನ