‘ಭಾವಿ ಸಿಎಂ ತಂದೆ ಎಂದು ದೇವೇಗೌಡರನ್ನು ಭೇಟಿಮಾಡಿದ್ದೀರಾ’?


22-05-2018 3431

ಬೆಂಗಳೂರು: ‘ಈ ಹಿಂದೆ ವೀರಶೈವ ಲಿಂಗಾಯತರನ್ನು ಒಡೆದು ರಾಜಕಾರಣ ಮಾಡಲಾಯ್ತು, ಈಗ ಲಿಂಗಾಯತರಿಗೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಭೇಟಿ ನಂತರ ಮಾಧ್ಯಮದವರೊಂದಗೆ ಮಾತನಾಡಿದ ಬಸನಗೌಡ, ಕುತಂತ್ರ ಮಾಡಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಹವಣಿಸುತ್ತಿದೆ. ಯಾವ ಪ್ರೋಟೊಕಾಲ್ ಆಧಾರದ ಮೇಲೆ ಮುಖ್ಯ ಕಾರ್ಯದರ್ಶಿ, ಪೊಲೀಸ್ ಅಧಿಕಾರಿಗಳು ದೇವೇಗೌಡರನ್ನು ಭೇಟಿ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ? ಭಾವಿ ಮುಖ್ಯಮಂತ್ರಿ ಮನೆಗೆ ಹೋಗುವುದು ಸಹಜ. ಆದರೆ ದೇವೇಗೌಡರನ್ನು ಮುಖ್ಯಮಂತ್ರಿ ತಂದೆ ಎಂಬ ಕಾರಣಕ್ಕೆ ಭೇಟಿ ಮಾಡಿದ್ರಾ? ಇದನ್ನ ಅಧಿಕಾರಿಗಳು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

‘ದರೋಡೆಕೋರರು, ಡಕಾಯಿತರು, ಮಹಾನ್ ಭ್ರಷ್ಟರು ಎಲ್ಲರೂ ರಾಜ್ಯಕ್ಕೆ ಬರುತ್ತಿದ್ದಾರೆ. ಮಹಾನ್ ಭ್ರಷ್ಟರೆಲ್ಲರೂ ಒಂದೆಡೆ ಸೇರುತ್ತಿದ್ದಾರೆ. ಭ್ರಷ್ಟರ ಮಹಾಕೂಟದ ನೇತೃತ್ವವನ್ನು ದೇವೇಗೌಡರು ವಹಿಸುತ್ತಿದ್ದಾರೆ, ಭ್ರಷ್ಟರ ಕೂಟ ರಚಿಸಿಲು ದೇವೇಗೌಡರು ಮುಂದಾಗಿದ್ದಾರೆ ಎಂದು ಟೀಕೆ ಮಾಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Basangouda Patil Yat Lingayat ವೀರಶೈವ ರಾಜಕಾರಣ