‘ಎರಡು ಡಿಸಿಎಂ ಹುದ್ದೆ ಮಾಡಲೇ ಬೇಕು’- ಎಂ.ಬಿ.ಪಾಟೀಲ


22-05-2018 666

ಬೆಂಗಳೂರು: ಎರಡು ಡಿಸಿಎಂ(ಉಪಮುಖ್ಯಮಂತ್ರಿ) ಹುದ್ದೆ ಮಾಡಲೇ ಬೇಕು. ದಕ್ಷಿಣಕ್ಕೆ ಒಂದು, ಉತ್ತರಕ್ಕೆ ಒಂದು ಡಿಸಿಎಂ ಹುದ್ದೆ ಕೊಡಲಿ, ಆಗ ಯಾವುದೇ ತಾರತಮ್ಯ ಬರುವುದಿಲ್ಲ, ನನಗಾಗಲಿ ಅಥವ ಶಾಮನೂರು ಶಿವಶಂಕರಪ್ಪ ಅವರಿಗಾಗಲಿ ಕೊಡಲಿ ಬೇಜಾರಿಲ್ಲ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರತ್ಯೇಕ ಲಿಂಗಾಯತ ಧರ್ಮ‌ ವಿಚಾರ, ಪ್ರತ್ಯೇಕತೆಯ ಕೂಗು ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ, ಚುನಾವಣೆಯೇ ಬೇರೆ, ನಮ್ಮ‌ ಅಸ್ಮಿತೆಯೇ ಬೇರೆ, ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಮುಂದುವರಿಯಲಿದೆ, ಲಿಂಗಾಯತ ಮುಖಂಡ ಜಾಮದಾರ್ ಜೊತೆ ಸೇರಿ ಮುಂದುವರಿಸುತ್ತೇವೆ. ಚುನಾವಣೆ ಮುಗಿದರೂ ಅದು ನಿಲ್ಲಲ್ಲ, ಮುಂದುವರಿಯುತ್ತದೆ ಎಂದು ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

78 ಶಾಸಕರೂ ಸಹ ಸಚಿವ ಸ್ಥಾನದ ಆಕಾಂಕ್ಷಿಗಳೆ. ಆದರೆ, ಎಲ್ಲರನ್ನೂ ಮಂತ್ರಿ ಮಾಡಲು ಆಗಲ್ಲ. ಹೈಕಮಾಂಡ್ ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೆ. ಜಾತಿ, ಸಮುದಾಯ, ಹಿರಿತನ ಎಲ್ಲವನ್ನೂ ನೋಡುತ್ತದೆ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಡಿಸಿಎಂ ಹುದ್ದೆಯ ಆಸೆಯೂ ಇದೆ. ಅದನ್ನು ಹೈಕಮಾಂಡ್ ನಿರ್ಧರಿಸಬೇಕು. ದಕ್ಷಿಣಕ್ಕೆ ಸಿಎಂ ಇದ್ದಾರೆ, ಉತ್ತರಕ್ಕೆ ಡಿಸಿಎಂ ನೀಡಲಿ ಅನ್ನೋದು ನಮ್ಮ ಇಚ್ಚೆ. ನಾವು ಸಿದ್ದರಾಮಯ್ಯನವರ ಬಳಿ ವಿನಂತಿ ಮಾಡಿದ್ದೇವೆ. ಈ ಕುರಿತು ನಿನ್ನೆ ನಮ್ಮ ಸಮುದಾಯದ ಶಾಸಕರು ಸಭೆ ನಡೆಸಿದ್ದೇವೆ ಎಂದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

M.B.Patil Chief Minister ದಕ್ಷಿಣ ಧರ್ಮ‌