ಕುತೂಹಲ ಕೆರಳಿಸಿರುವ ಸ್ಪೀಕರ್ ನೇಮಕ ಅರ್ಜಿ ವಿಚಾರಣೆ


19-05-2018 581

ಬೆಂಗಳೂರು: ಹಂಗಾಮಿ ಸ್ಪೀಕರ್ ಆಗಿ ಕೆ.ಜಿ ಬೋಪಯ್ಯ ಅವರ ನೇಮಕವನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿರುವ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ನ  ನ್ಯಾಯಮೂರ್ತಿಗಳಾದ ಎ.ಕೆ ಸಿಕ್ರಿ ನೇತೃತ್ವದ ಪೀಠದಲ್ಲಿ ನಡೆಯಲಿದೆ. 'ಬೋಪಯ್ಯಗೆ ಹಿರಿತನವೂ ಇಲ್ಲ, ವಿಶ್ವಾಸಾರ್ಹತೆಯೂ ಇಲ್ಲ, ಇಂಥವರನ್ನು ನೇಮಿಸಿರುವ ರಾಜ್ಯಪಾಲರ ನಡೆ ಸರಿಯಲ್ಲ, ಕೂಡಲೇ ಬೋಪಯ್ಯ ನೇಮಕ ರದ್ದು ಮಾಡಬೇಕು, ಸದನದ ಹಿರಿಯ ಸದಸ್ಯರನ್ನು ಹಂಗಾಮಿ ಸ್ಪೀಕರ್ ಆಗಿ ಮಾಡಬೇಕು' ಎಂದು ಸುಪ್ರೀಂ ಕೋರ್ಟಿಗೆ ನೀಡಿರುವ ದೂರಿನಲ್ಲಿ ಕಾಂಗ್ರೆಸ್ ಮನವಿ ಮಾಡಿತ್ತು.

ನಿನ್ನೆ ರಾತ್ರಿಯೇ ತುರ್ತು ವಿಚಾರಣೆ ನಡೆಸುವಂತೆಯೂ ಕಾಂಗ್ರೆಸ್ ಕೋರಿತ್ತು, ಆದರೆ ಇಂದು ಬೆಳಿಗ್ಗೆ ಸಮಯ ನಿಗದಿ ಮಾಡಲಾಗಿದೆ. ರಜೆಯ ನಡುವೆಯೂ ತುರ್ತು ವಿಚಾರಣೆ ನಡೆಸಲಿದೆ ಸುಪ್ರೀಂ ಕೋರ್ಟ್.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

K.G Bopaiah Supreme court ವಿಚಾರಣೆ ನ್ಯಾಯಮೂರ್ತಿ