'ಬಿಜೆಪಿಯ ಕುದುರೆ ವ್ಯಾಪಾರ ಸಫಲವಾಗಲ್ಲ'- ಕೆ.ಹೆಚ್ ಮುನಿಯಪ್ಪ


17-05-2018 525

ಬೆಂಗಳೂರು: ಬಹುಮತ ಇಲ್ಲದಿದ್ದರೂ ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ನೀಡಿದ್ದರಿಂದ ಕಾಂಗ್ರೆಸ್-ಜೆಡಿಎಸ್ ತೀವ್ರ ಅಸಮಾಧಾನಗೊಂಡಿದೆ. ಈ ಕುರಿತು ಈಗಲ್ ಟನ್ ರೆಸಾರ್ಟ್ ಬಳಿ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಹಾಗು ಸಂಸದ ಕೆ.ಹೆಚ್ ಮುನಿಯಪ್ಪ, ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಕಾಂಗ್ರೆಸ್ ಪಕ್ಷ ಕುಮಾರ ಸ್ವಾಮಿಯವರಿಗೆ ಬೆಂಬಲ ವ್ಯಕ್ತಪಡಿಸಿದ್ದೆವು. ಆದರೆ, ರಾಜ್ಯಪಾಲರು ನಮಗೆ ಅವಕಾಶ ಮಾಡಿಕೊಟ್ಟಿಲ್ಲ. ತದ್ವಿರುದ್ಧವಾಗಿ ಬಹುಮತ ಇಲ್ಲದ ಪಕ್ಷಕ್ಕೆ ಅವಕಾಶ ಕೊಟ್ಟಿದ್ದಾರೆ ಎಂದು ದೂರಿದ್ದಾರೆ. ಗೋವಾದಲ್ಲಿಯೂ ಕಾಂಗ್ರೆಸ್ ಗೆ ಅವಕಾಶ ಕೊಡಲಿಲ್ಲ. ಬಿಜೆಪಿಯ ಕುದುರೆ ವ್ಯಾಪಾರ ಸಫಲವಾಗಲ್ಲ, ಶಿಸ್ತಾದ ಕಾನೂನು ಇದೆ. ಯಾರೂ ಎಲ್ಲಿಯೂ ಹೋಗೋಕೆ ಆಗಲ್ಲ. ಕಲವೇ ದಿನಗಳಲ್ಲಿ ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿಯಲಿದ್ದಾರೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

K.H.Muniyappa Resort ಅಸಮಾಧಾನ ಅವಕಾಶ