ಬಿಎಸ್ವೈ ನೇತೃತ್ವದಲ್ಲಿ ಮೊದಲ ಸಂಪುಟ ಸಭೆ


17-05-2018 468

ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಮೊದಲ ಸಂಪುಟ ಸಭೆಯಲ್ಲಿ ಯಾವುದೇ ಪ್ರಮುಖ ನಿರ್ಣಯಗಳನ್ನು ಕೈಗೊಂಡಿಲ್ಲ. ಮೊದಲ ಸಂಪುಟ ಸಭೆಯಲ್ಲಿ ಕೇವಲ ಒಂದು ನಿರ್ಣಯ ತೆಗೆದುಕೊಂಡ ಸಿಎಂ, 14ನೇ ವಿಧಾನಸಭೆ ವಿಸರ್ಜಿಸುವ ನಿರ್ಣಯ ಮಾತ್ರ ಕೈಗೊಂಡರು. ಹಂಗಾಮಿ ಸ್ಪೀಕರ್ ನೇಮಕ ಮಾಡುವ ಬಗ್ಗೆಯೂ ನಿರ್ಣಯ ಮಾಡದ ಯಡಿಯೂರಪ್ಪ, 15ನೇ ವಿಧಾನ ಸಭೆಯ ಮೊದಲ ಅಧಿವೇಶನ ಕರೆಯುವ ದಿನಾಂಕವೂ ನಿಗದಿ ಮಾಡಿಲ್ಲ. ಜಂಟಿ ಅಧಿವೇಶನದ ದಿನಾಂಕವನ್ನೂ ನಿಗದಿ ಮಾಡಿಲ್ಲ.

ರಾಜ್ಯದ ಪ್ರಸ್ತುತ ಕಾನೂನು ಸುವ್ಯವಸ್ಥೆ ಮತ್ತು ಅಧಿಕಾರಿಗಳ ಪ್ರಸ್ತುತ ಹುದ್ದೆ ಕುರಿತ ಮಾಹಿತಿ ಪಡೆದದರು ಸಿಎಂ ಬಿ.ಎಸ್.ಯಡಿಯೂರಪ್ಪ. ಮೊದಲ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ 14ನೇ ವಿಧಾನಸಭೆ ವಿಸರ್ಜನೆ ಮಾಡುವ ನಿರ್ಣಯವನ್ನು ರಾಜಭವನಕ್ಕೆ ರವಾನೆ ಮಾಡಲಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

B.S.Yeddyurappa Cabinet meeting ನಿರ್ಣಯ ವಿಸರ್ಜನೆ