ಡಿ.ಸಿ ತಮ್ಮಣ್ಣಗೆ ಜಿ.ಮಾದೇಗೌಡರ ತಿರುಗೇಟು


10-05-2018 618

ಮಂಡ್ಯ: ಮಾಜಿ ಸಂಸದ ಹಾಗೂ‌ ಹಿರಿಯ ಕಾವೇರಿ ಹೋರಾಟಗಾರ ಜಿ.ಮಾದೇಗೌಡರು ಪುತ್ರನ ಪರವಾಗಿ‌ ರಾಜಕೀಯ ಅಖಾಡಕ್ಕಿಳಿದಿದ್ದಾರೆ. ತನ್ನ ಪುತ್ರ ಮಧು ಮಾದೇಗೌಡ ನನ್ನು ಗೆಲ್ಲಿಸುವಂತೆ ಮದ್ದೂರು ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದ್ದಾರೆ. ಮದ್ದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿಸುತ್ತಿದ್ದಾರೆ ಮಧು ಜಿ.ಮಾದೇಗೌಡ. ಹಣ ಆಸ್ತಿ ಮಾಡಲು ನಾನು ನನ್ನ ಪುತ್ರನನ್ನು ಚುನಾವಣೆಗೆ ನಿಲ್ಲಿಸಿಲ್ಲ. ನಾನು ಕಂಡಿರೋ ಗಾಂಧಿ ಗ್ರಾಮದ ಕನಸು ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ದಿಗಾಗಿ ನಿಲ್ಲಿಸಿದ್ದೇನೆ. ಅವನು ತಪ್ಪು ಮಾಡಿದರೆ ಹೇಳಿ, ತಿದ್ದಿ ಬುದ್ಧಿ ಹೇಳಿ ಸರಿ ಮಾಡುತ್ತೇನೆ ಎಂದರು ಮಾದೇಗೌಡರು. ಇನ್ನೂ ಬೀದಿಲಿ ನಿಂತು ಕಾವೇರಿ ಹೋರಾಟದ ಮಾತನಾಡುವವರಿಗೆ ಉತ್ತರಿಸುವ ಅಗತ್ಯವಿಲ್ಲ. ಅವರಿಗೆ ಕಾವೇರಿ ಹೋರಾಟದ ಗಂಧ ಗಾಳಿಯೂ ಗೊತ್ತಿಲ್ಲವೆಂದು ಮಾಜಿ ಶಾಸಕ ಡಿ.ಸಿ ತಮ್ಮಣ್ಣಗೆ ತಿರುಗೇಟು ನೀಡಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

G Madegowda D c thammanna ಅಭಿವೃದ್ಧಿ ಮಾಜಿ ಸಂಸದ