'ಗುಡ್ಡ ಅಗೆದು ಇಲಿ ಹಿಡಿದಿದ್ದಾರೆ'- ಸಿ.ಎಂ ಇಬ್ರಾಹಿಂ


08-05-2018 502

ಬೆಂಗಳೂರು: ಆನಂದ್ ಸಿಂಗ್ ಮಾಲೀಕತ್ವದ ರೆಸಾರ್ಟ್ ಮೇಲೆ ಐಟಿ ದಾಳಿ ಹಿನ್ನೆಲೆ, ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ, ಐಟಿ ಅಧಿಕಾರಿಗಳಿಗೆ ಸಿಎಂ ಇಬ್ರಾಹಿಂ ಬಿಟ್ಟು ಬೇರೇನೂ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ನನ್ನ ನೋಡಿದರು ನಿಮ್ಮ ಭಾಷಣ ಚೆನ್ನಾಗಿದೆ ಅಂದರು. ಬದಾಮಿಯಲ್ಲಿ ಹಣ ಖರ್ಚು ಮಾಡಿ ಸಿಎಂ ಗೆಲ್ಲುವ ಪರಿಸ್ಥಿತಿ ಇಲ್ಲ. ಇಲ್ಲಿಯ ಜನರೇ ಹಣ ಖರ್ಚು ಮಾಡಿ ಸಿಎಂ ಅವರನ್ನ ಗೆಲ್ಲಿಸುತ್ತಾರೆ. ಇದು ರಾಜಕೀಯ ಪ್ರೇರಿತ ದಾಳಿ ಅಲ್ಲದೇ ಇನ್ನೇನು ಎಂದರು.

ಐಟಿ ಅಧಿಕಾರಿಗಳು ನಮ್ಮ ಬೀಗರಲ್ಲ, ನಮ್ಮ ಜೊತೆಗೆ ಬೀಗಸ್ತನ ಮಾಡೋದಕ್ಕೆ ಬಂದಿರಲಿಲ್ಲ. ಅವರು ಬಂದಿದ್ದೇ ನಮ್ಮನ್ನ ಹೆದರಿಸೋಕೆ. ಏನೋ ಸಿಗುತ್ತೆ ಅಂತ ಆಸೆ ಇಟ್ಟುಕೊಂಡು ಬಂದಿದ್ದರು. ನಮ್ಮ ಹತ್ರ ಏನು ಸಿಗಬೇಕು ಹೇಳಿ, ನಾವು ಅಕ್ಷಯ ಪಾತ್ರೆಯಲ್ಲಿ ಭಿಕ್ಷೆ ಬೇಡುವ ಜನ. ಬಿಜೆಪಿಯರ ಮೇಲೆ ಐಟಿ ದಾಳಿ ಆಗಲ್ಲ, ಯಾಕೆಂದರೆ ಕೇಂದ್ರದಲ್ಲಿ ಸರಕಾರ ಅವರದ್ದೇ ಇದೆ. ಬಿಜೆಪಿಯವರು ದುಡ್ಡು ಹಂಚುವ ಕೆಲಸ ಮಾಡುತ್ತಾರೆ, ಅದನ್ನ ಜನರೇ ತಡೆಯಬೇಕು, ನಮ್ಮಿಂದಾಗಲ್ಲೆಂದು ಇಬ್ರಾಹಿಂ ಪ್ರತಿಕ್ರಿಯಿಸಿದ್ದಾರೆ.

 

 

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

CM Ibrahim IT Raid ರಾಜಕೀಯ ಅಧಿಕಾರಿ