ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ಐವರ ಬಂಧನ


08-05-2018 395

ಬೆಂಗಳೂರು: ಬೃಹತ್ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜಾಲವನ್ನು ಬೇಧಿಸಿರುವ ಮಹದೇವಪುರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಹೊಸಕೋಟೆ ಮೂಲದ ಜಾಲದ ಕಿಂಗ್ ಪಿನ್ ಗೌತಮ್ ಸೇರಿದಂತೆ ಐವರು ಆರೋಪಿಗಳ ಬಂಧಿಸಿ 50ಮೊಬೈಲ್, ಎರಡು ಲ್ಯಾಪ್ ಟಾಪ್ ಹಾಗೂ ನಗದು ಸೇರಿ ಲಕ್ಷಾಂತರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಕಾಡುಗೋಡಿಯ ಸೀಗೆಹಳ್ಳಿ ಬಳಿ ಬೆಟ್ಚಿಂಗ್ ದಂಧೆ ನಡೆಸುತ್ತಿದ್ದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ಬಂಧಿಸಿ ವಿಚಾರಣೆ ನಡೆಸಿದಾಘ ಹೊಸಕೋಟೆ, ಕಾಡುಗೋಡಿ, ಕೆಆರ್ ಪುರ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಚಿಂಗ್ ದಂಧೆ ನಡೆಸುತ್ತಿರುವುದನ್ನು ಬಾಯ್ಬಿಟ್ಟಿದ್ದಾರೆ. ಆರೋಪಿಗಳ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

IPL Betting ಅಬ್ದುಲ್ ಅಹದ್ ಬೆಟ್ಚಿಂಗ್