‘ನಾನು ರಾಜಕಾರಣದಲ್ಲಿ ಸಿಹಿ,ಕಹಿ ಅನುಭವಿಸಿದ್ದೇನೆ'-ಹೆಚ್ಡಿಡಿ


08-05-2018 510

ಮೈಸೂರು: ಮೈಸೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಪ್ರಧಾನಿ ಹಾಗು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಮಾತನಾಡಿದ್ದಾರೆ. 'ಕೆಳೆದ ದಿನಗಳಲ್ಲಿ ನಾನು ಎರಡು ದಿನ ಹೈದ್ರಾಬಾದ್, ಮುಂಬೈ ಕರ್ನಾಟಕದ ಪ್ರವಾಸ ಮಾಡಿದ್ದೇನೆ. ಈ ಬಾರಿ ಜೆಡಿಎಸ್ ಗೆ ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚಿನ ಸ್ಥಾನ ನೀಡಲು ಮತದಾರ ನಿರ್ಧಾರ ಮಾಡಿದ್ದಾನೆ' ಎಂದು ಹೇಳಿದ್ದಾರೆ. ಎರಡು ರಾಷ್ಟ್ರೀಯ ಪಕ್ಷದ ಆಡಳಿತ ನೋಡಿದ್ದೇವೆ ಈ ಬಾರಿ ಜೆಡಿಎಸ್ ಗೆ ಬೆಂಬಲ ನೀಡುತ್ತೇವೆ ಎಂದು ಜನ ಹೇಳುತ್ತಿದ್ದಾರೆ. ಜೆಡಿಎಸ್ ಕಿಂಗ್ ಮೇಕರ್ ಆಗತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ, ಯಾವ ಕಾರಣಕ್ಕೆ ಕಿಂಗ್ ಆಗಲು ಸಾಧ್ಯ ಇಲ್ಲ ಅಂತಾ ಹೇಳಿ ಎಂದು ದೇವೇಗೌಡರು ಪ್ರಶ್ನಿಸಿದ್ದಾರೆ.

‘ನಾನು ರಾಜಕಾರಣದಲ್ಲಿ ಸಿಹಿ,ಕಹಿ ಅನುಭವಿಸಿದ್ದೇನೆ, ಯಾರು ಏನು ಹೇಳಿದರೂ ಪರವಾಗಿಲ್ಲ ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರ ಚುಕ್ಕಾಣಿ ಹಿಡಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

H.D.Deve Gowda press meet ಸಿಹಿ,ಕಹಿ ರಾಷ್ಟ್ರೀಯ