‘ಬಿಜೆಪಿಯವರನ್ನು ದಯವಿಟ್ಟು ಮನೆಗೆ ಕಳುಹಿಸಿ’-ಸಿಎಂ


07-05-2018 418

ಚಾಮರಾಜನಗರ: ನರೇಂದ್ರ ಮೋದಿಗೆ ರಾಜ್ಯಕ್ಕೆ ಬಂದು ಸುಳ್ಳು ಹೇಳೋದೆ ಕೆಲಸ ಎಂದು, ಪ್ರಧಾನಿ ವಿರುದ್ಧ ಸಿಎಂ ಸಿದ್ದರಾಮಯ್ಯ ದೂರಿದ್ದಾರೆ. ಜಿಲ್ಲೆಯ ಹನೂರಿನಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಸ್ವತಂತ್ರ ಭಾರತದಲ್ಲಿ ಸುಳ್ಳುಗಾರ ಇದ್ದರೆ ಅದು ನರೇಂದ್ರ ಮೋದಿ. ಬಿಜೆಪಿಯವರಿಗೆ ಒಂದು ನಾಲಿಗೆ ಇಲ್ಲ, ಕೇಂದ್ರ ಸಚಿವ ಜಾವ್ಡೇಕರ್ ಒಬ್ಬ ಗೇಲಿದಾರ ಎಂದು ಲೇವಡಿ ಮಾಡಿದ್ದಾರೆ.

ಬಿಜೆಪಿಯವರು ಮೋಸಗಾರರು, ಬಡವರ, ರೈತರ ವಿರೋಧಿಗಳು ಎಂದು ಕಟುವಾಗಿ ಟೀಕಿಸಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿಯವರನ್ನು ದಯವಿಟ್ಟು ಮನೆಗೆ ಕಳುಹಿಸಿ. ಜೆಡಿಎಸ್ ಗೆ ಓಟು ಹಾಕಿದರೆ ಬಿಜೆಪಿಗೆ ಓಟು ಹಾಕಿದ ಹಾಗೆ. ಬಿಜೆಪಿಯವರಿಗೆ ಓಟು ಹಾಕಿದರೆ ಜೈಲಿಗೆ ಹೋದವರು ಮತ್ತೇ ಬರುತ್ತಾರೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಸತ್ಯ. ತಾನು ಮುಖ್ಯಮಂತ್ರಿ ಆಗೋದು ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Narendra Modi Siddaramaiah ಸುಳ್ಳು ರೈತ