‘ಮಾಧ್ಯಮಗಳು 30-35 ಸ್ಥಾನಕ್ಕೆ ಸೀಮಿತ ಮಾಡಿವೆ’- ಹೆಚ್ಡಿಕೆ


07-05-2018 630

ಬೆಂಗಳೂರು: ನಗರದ ಜೆಡಿಎಸ್ ಪಕ್ಷದ ಕಚೇರಿ ಜೆ.ಪಿ ಭವನದಲ್ಲಿ ಮಾತನಾಡಿದ ಹೆಚ್.ಡಿ ಕುಮಾರ ಸ್ವಾಮಿ ಮಾಧ್ಯಮದ ವಿರುದ್ಧ ಕಿಡಿಕಾರಿದ್ದಾರೆ. ದಿನಕ್ಕೆ 10ಕಡೆ ಪ್ರಚಾರ ಮಾಡಿದರೂ ಒಂದು ಕ್ಷಣ ಟಿವಿಯಲ್ಲಿ ಬರಲ್ಲ. ಬಿಜೆಪಿ, ಕಾಂಗ್ರೆಸ್ ನ ಕಾರ್ಯಕ್ರಮ ಇಡೀ ದಿನ ಟಿವಿಯಲ್ಲಿ ಬರುತ್ತದೆ. ಜೆಡಿಎಸ್ ಪ್ರೋಗ್ರಾಮ್ ಬರಲ್ಲ ಎಂಬ ನೋವಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಸ್ಥಾನ ಗೆಲ್ಲುವ ಸಂಪೂರ್ಣ ವಿಶ್ವಾಸ ನನಗಿದೆ. ಆದರೆ, ಎಲ್ಲ ಮಾಧ್ಯಮಗಳು 30-35ಕ್ಕೆ ಸೀಮಿತ ಮಾಡಿದೆ. ಮಾಧ್ಯಮಗಳ ಲೆಕ್ಕಾಚಾರ ಪರಿಗಣಿಸಿದರೂ ನಮ್ಮ ಬೆಂಬಲ ಇಲ್ಲದೇ ಸರ್ಕಾರ ರಚನೆ ಸಾಧ್ಯವಿಲ್ಲ. ಅಂಥ ಸಂದರ್ಭ ಬಂದರೆ 'ರಾಜ್ಯದ ಜನರ ಒಳಿತಿಗೆ ನಮ್ಮ ಯೋಜನೆಗಳನ್ನು ಅನುಷ್ಠಾನ ಮಾಡುವ ಪಕ್ಷದ ಜತೆ ಮಾತುಕತೆಗೆ ಸಿದ್ಧ' ಎಂದು, ಕುಮಾರ ಸ್ವಾಮಿ ಪರೋಕ್ಷವಾಗಿ ಮೈತ್ರಿಗೆ ಸಿದ್ಧವಿದೆ ಎಂಬ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

ಬಹುಮತ ಬರದಿದ್ದರೆ ವಿಪಕ್ಷ ಸ್ಥಾನದಲ್ಲಿ ಕೂರಲು ಸಿದ್ಧ ಎನ್ನುತ್ತಿದ್ದ ಕುಮಾರಸ್ವಾಮಿ ಯೂ ಟರ್ನ್ ಹೊಡೆದಿದ್ದಾರೆ. ನಿಮ್ಮ ಯೋಜನೆ ಬಿಜೆಪಿ ಅಥವಾ ಕಾಂಗ್ರೆಸ್ ಜಾರಿ ಮಾಡುತ್ತದೆ ಎಂದಾದರೆ ಆ ಪಕ್ಷಗಳಿಗೆ ಬಾಹ್ಯ ಬೆಂಬಲ ನೀಡುತ್ತೀರಾ ಎಂಬ ಪ್ರೆಶ್ನೆಗೆ ಕುಮಾರಸ್ವಾಮಿ ತಡವರಿಸಿ, ಬಹುಮತ ಪಡೆದು ನಾವೇ ಸರ್ಕಾರ ರಚಿಸುತ್ತೇವೆ ಎಂದು ಹೇಳಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

H.D kumara swamy Media ಅನುಷ್ಠಾನ ಬಹುಮತ