'ಜನತಾ ಪ್ರಣಾಳಿಕೆ...ಜನರಧ್ದೇ ಆಳ್ವಿಕೆ'


07-05-2018 450

ಬೆಂಗಳೂರು: ಕಾಂಗ್ರೆಸ್ ಹಾಗು ಬಿಜೆಪಿ ಪಕ್ಷಗಳು ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಇದರ ಬೆನ್ನಲ್ಲೇ ಜೆಡಿಎಸ್ ಪಕ್ಷ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. 'ಜನತಾ ಪ್ರಣಾಳಿಕೆ, ಜನರದ್ದೇ ಆಳ್ವಿಕೆ' ಎಂಬ ಹೆಸರಿನ ಪ್ರಣಾಳಿಕಯನ್ನು ಬೆಂಗಳೂರಿನ ಜೆ.ಪಿ.ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬಿಗುಗಡೆ ಮಾಡಿದರು.

ಜೆಡಿಎಸ್ ಚುನಾವಣೆ ಪ್ರಣಾಳಿಕೆ ಪ್ರಮುಖಾಂಶಗಳು:

1) ರೈತರ ಸಂಪೂರ್ಣ ಸಾಲಮನ್ನಾ.

2) ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ವಿದ್ಯುತ್.

3) ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಉಚಿತ.

4) ಇಸ್ರೇಲ್ ಮಾದರಿ ಕೃಷಿ ಪದ್ದತಿ ಅಳವಡಿಕೆ.

5) ಸ್ತ್ರೀ ಶಕ್ತಿ ಸ್ವಸಾಯ ಸಂಘಗಳ ಸಾಲ ಮನ್ನಾ.

6) ಗರ್ಭಿಣಿಯರಿಗೆ 6 ತಿಂಗಳಿನಿಂದ 12 ತಿಂಗಳ ವರೆಗೂ ಪ್ರತಿ ತಿಂಗಳು 6000 ರೂ. ಧನಸಹಾಯ.

7) ವಿಕಲಚೇತನರಿಗೆ ತಿಂಗಳಿಗೆ 2000 ಸಹಾಯಧನ.

8) 70 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಮಾಸಿಕ 5000 ರೂ.

9) ಪ್ರತಿ ತಿಂಗಳು ವಿಧಾನಸೌಧದದಲ್ಲಿ ರೈತರ ಸಭೆ.

10) ವಿಧವಾ ವೇತನ ಮಾಸಿಕ 2000 ರೂ.

11) ವಿಕಲಚೇತರನ್ನು ಮದುವೆ ಯಾದರೆ 50 ಸಾವಿರದಿಂದ 1 ಲಕ್ಷದವರೆಗೆ ಸಹಾಯಧನ.

12) ಹಳ್ಳಿಗಳ ಅವಿದ್ಯಾವಂತ ಯುವಕ, ಯುವತಿಯರಿಗೆ ಸಸಿ ನಡುವ ಕೆಲಸ ನೀಡಿ ಮಾಸಿಕ 5000 ರೂ ಗೌರವಧನ.

13) ವಯೋವೃದ್ಧರಿಗೆ ಉಚಿತ ಬಸ್ ಪಾಸ್.

14) ಬಿಪಿಎಲ್ ಕಾರ್ಡ್ ದಾರರಿ ಗೆ 30 ಕೆಜಿ ಅಕ್ಕಿ.

15) ರೈತರ ಬೆಳೆಗೆ ಬೆಂಬಲ ಬೆಲೆ.

16) ಸಣ್ಣ ಟ್ರಾಕ್ಟರ್ ಖರೀದಿಗೆ ಶೇ75 ರಷ್ಟು ಹಾಗೂ ಇತರೆ ಸಲಕರಣೆ ಖರೀದಿಗೆ ಶೇ. 90 ರಷ್ಟು ಸಬ್ಸಿಡಿ ನೀಡಲಾಗುವುದು.

17) ಬಡ ಮಹಿಳೆಯರಿಗೆ ಕುಟುಂಬ ನಿರ್ವಹಣೆಗೆ ಮಾಸಿಕ 2000 ರೂ.

18) ಆರ್ಯವೈಶ್ಯ ಜನಾಂಗದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆ.

19) ಉದ್ಯೋಗವಂತ ಮಹಿಳೆಯರಿಗೆ ಬೆಂಗಳೂರಿನಲ್ಲಿ ಸು.100 ವಸತಿ ನಿಲಯಗಳ ಸ್ಥಾಪನೆ.

20) ಡಾ. ವಿಷ್ಣುವರ್ಧನ್ ಸಮಾಧಿ ಸ್ಥಳದ ವಿವಾದ ಬಗೆಹರಿಸಲಾಗುವುದು.

21) ಆಶಾ ಕಾರ್ಯಕರ್ತರ ಪ್ರೋತ್ಸಾಹ ಧನ 3500 ರಿಂದ 5000 ರೂಗೆ ಏರಿಕೆ.

22) ವಕೀಲರ ಸಂಘಕ್ಕೆ 100 ಕೋಟಿ ಅನುದಾನ. ಮತ್ತು ವಕೀಲರಿಗೆ 5000 ಸ್ಟೇಫಂಡ್.

23) ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮುಂದುವರಿಕೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

H.D.Kumaraswamy manifesto ಗ್ರಾಮ ವಾಸ್ತವ್ಯ ವಕೀಲ