ಶಾಸಕ ರಾಜು ಕಾಗೆಗೆ ಗ್ರಾಮಸ್ಥರ ತರಾಟೆ


07-05-2018 589

ಬೆಳಗಾವಿ: ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜು ಕಾಗೆ ಅವರನ್ನು ಶಿರೂರು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿರೂರಿಗೆ ಆಗಮಿಸಿ ಪ್ರಚಾರದಲ್ಲಿ ತೊಡಗಿದ್ದ ಅವರ ಭಾಷಣಕ್ಕೆ ಅಡ್ಡಿ ಉಂಟುಮಾಡಿದರು. ಅಲ್ಲದೇ ನಮ್ಮ ಊರಿಗೆ ಯಾಕೆ ಬಂದಿರಿ, 15 ವರ್ಷಗಳಲ್ಲಿ ನಮ್ಮೂರಿಗೆ ಎನೂ ಮಾಡಿದ್ದೀರಿ, ಈಗ ಮತ ಬೇಡಲು ಬಂದಿದ್ದಿರಾ? ಎಂದು ಗ್ರಾಮಾಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಹೋದಲ್ಲೆಲ್ಲಾ ರಾಜು ಕಾಗೆಗೆ ಮತದಾರರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆಯೂ ಸಹ ಇದೇ ರೀತಿ ಚಮಕೇರಿ ಗ್ರಾಮದಲ್ಲಿ ನಡೆದಿತ್ತು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Raju kage MLA ಗ್ರಾಮಾಸ್ಥರು ಕಾಗವಾಡ