ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ವಕ್ತಾರ ಟೀಕೆ


05-05-2018 446

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ  ಬೆಂಗಳೂರಿನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದಾರೆ. ಬಿಜೆಪಿಯ ಪ್ರಣಾಳಿಕೆ ಬರೀ ಪ್ರಣಾಳಿಕೆ ಅಲ್ಲ, ಅದು ದೂರ ದೃಷ್ಟಿಯಿಂದ ಕೂಡಿದೆ ಎಂದು ಹೇಳಿದರು. ಹಲವಾರು ವರ್ಷಗಳಿಂದ ರಾಜ್ಯವನ್ನು ಕಾಂಗ್ರೆಸ್ ಆಳುತ್ತಿದೆ. ಆದರೆ, ರಾಜ್ಯಕ್ಕೆ ಏನೂ ಮಾಡಿಲ್ಲ ಎಂದು ದೂರಿದ್ದಾರೆ.

ದೇಶದ, ರಾಜ್ಯದ ಬೆನ್ನೆಲುಬು ರೈತರ ಸಾಲ ಮನ್ನಾ ಮಾಡುವುದಾಗಿ ನಾವು ಭರವಸೆ ನೀಡಿದ್ದೇವೆ. ಸಿದ್ದರಾಮಯ್ಯ ಕೇವಲ ಐವತ್ತು‌ ಸಾವಿರ ಮಾತ್ರ ರೈತರ ಸಾಲ ಮನ್ನಾ ಮಾಡಿದ್ದರು. ಅದರಲ್ಲೂ ಕೇವಲ ಸಹಕಾರಿ ಸಂಘಗಳ ಸಾಲ ಮನ್ನಾ ಮಾಡಿದ್ದಾರೆ ಅಷ್ಟೇ. ಅದರೆ ನಾವು ರಾಷ್ಟ್ರಿಕೃತ ಬ್ಯಾಂಕುಗಳ ‌ಸಾಲ ಮನ್ನಾ ಮಾಡಲಿದ್ದೇವೆ, 'ರೈತ ಬಂಧು' ಯೋಜನೆಗೆ ಚಾಲನೆ ನೀಡಲಿದ್ದೇವೆ, ನಾವು ಮಹಿಳೆಯರ ಸುರಕ್ಷತೆ ಬಗ್ಗೆ ಗಮನ ಹರಿಸಿದ್ದೇವೆ,  ಕಾನೂನು ಸುವ್ಯವಸ್ಥೆ ಬಗ್ಗೆ ಗಮನ ಹರಿಸಿದ್ದೇವೆ ಎಂದರು.

ಯಡಿಯೂರಪ್ಪ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಯಡಿಯೂರಪ್ಪ ಅವರು ರಾಜ್ಯದ ಪ್ರಶ್ನಾತೀತ ನಾಯಕ. ಅವರ ಬಗ್ಗೆ ಟೀಕೆ ಮಾಡುತ್ತೀರಾ?  ಅವರ ಬಗ್ಗೆ ಭ್ರಷ್ಟಾಚಾರ ಆರೋಪ ಮಾಡುತ್ತಿರಾ? ರಾಹುಲ್ ಗಾಂಧಿ ನೀವು ಬೇಲ್ ಮೂಲಕ ಹೊರಗಿದ್ದೀರಿ ನೆನಪಿರಲಿ. ಆದರೆ ಯಡಿಯೂರಪ್ಪ ಅವರ ಮೇಲೆ ಒಂದೇ ಒಂದು ಕೇಸ್ ಇಲ್ಲ. ಕೋರ್ಟ್ ನಿಂದ ಎಲ್ಲವೂ ಖುಲಾಸೆ ಆಗಿದೆ ಎಂದರು.

ನಿಮ್ಮ ಪಕ್ಷದಲ್ಲಿ ಎಷ್ಟು ಮಂದಿ ಭ್ರಷ್ಟಾಚಾರ ಆರೋಪ ಹೊತ್ತವರು ಇಲ್ಲ. ಮೊದಲಿನವರು ಸೋನಿಯಾ ಗಾಂಧಿ, ಎರಡನೇಯವರು ರಾಹುಲ್ ಗಾಂಧಿ, ಮಹದೇವಪ್ಪ, ಕೆ.ಜೆ.ಜಾರ್ಜ್,  ಡಿ.ಕೆ.ಶಿವಕುಮಾರ್ ಗೋವಿಂದ್ ರಾಜ್ ಡೈರಿ ಪ್ರಕರಣ, ಅವರ ಮೇಲೆ ಭ್ರಷ್ಟಾಚಾರ ಆರೋಪ ಇಲ್ವಾ? ನಮ್ಮ ಪಕ್ಷದ ಮುಖಂಡರ ಮೇಲೆ ಭ್ರಷ್ಟಾಚಾರ ಆರೋಪದ ವೀಡಿಯೋ ಮಾಡುತ್ತೀರಿ. ನಿಮ್ಮ ಮೇಲೆಯೇ ಭ್ರಷ್ಟಾಚಾರ ಆರೋಪಗಳಿವೆ ಎಂದು ಕಿಡಿಕಾರಿದ್ದಾರೆ. ಯಾರು ಭ್ರಷ್ಟಾಚಾರದಿಂದ ದೇಶವನ್ನು ಲೂಟಿ ಮಾಡಿದರೋ ಅವರು ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ಗೆ ಟಾಂಗ್ ಕೊಟ್ಟಿದ್ದಾರೆ.


ಒಂದು ಕಮೆಂಟನ್ನು ಬಿಡಿ