ಬಹಿರಂಗ ಚರ್ಚೆಗೆ ಬನ್ನಿ ಬಿಎಸ್ ವೈ ಸವಾಲು


05-05-2018 456

ಬೆಳಗಾವಿ: ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು ಅನ್ನೊ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಯಡಿಯೂರಪ್ಪ ಗರಂ ಆಗಿದ್ದು, ಸಿದ್ದರಾಮಯ್ಯ ಅವರಿಗೆ ಯಡಿಯೂರಪ್ಪ ಸವಾಲು ಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ, ಜಿ.ಪರಮೇಶ್ವರ, ಮಲ್ಲಿಕಾರ್ಜುನ್ ಖರ್ಗೆ ಬಹಿರಂಗ ಚರ್ಚೆಗೆ ಒಂದೇ ವೇದಿಕೆಗೆ ಬನ್ನಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು ಎಂದು ಸಿದ್ದರಾಮಯ್ಯ ಹೇಳುತ್ತಾರೆ, ಹೇಳಿಕೊಳ್ಳಲಿ ಬಿಡಿ. ಇನ್ನೊಂದು ವಾರದಲ್ಲಿ ಮನೆಗೆ ಹೋಗುವವರ ಬಗ್ಗೆ ಯಾಕೆ ಮಾತನಾಡೋದು. ಅವರಪ್ಪನಾಣೆಗೂ ಯಡಿಯೂರಪ್ಪ ಸಿಎಂ ಆಗಲ್ಲ ಅನ್ನೊ ಸಿಎಂ ಸಿದ್ದರಾಮಯ್ಯ ಹೇಳಿಕೆಗೂ ಯಡಿಯೂರಪ್ಪ ಕೆಂಡಾಮಂಡಲರಾದರು. ಸಿದ್ದರಾಮಯ್ಯ ತಲೆ ತಿರುಕ, ಹುಚ್ಚುಹುಚ್ಚಾಗಿ ಮಾತನಾಡುತ್ತಿದ್ದಾರೆ, ಸಿ.ಎಂ.ಇಬ್ರಾಹಿಂ ಒಬ್ಬ ಜೋಕರ್ ಎಂದು ಗೇಲಿಮಾಡಿದ್ದಾರೆ.


ಒಂದು ಕಮೆಂಟನ್ನು ಬಿಡಿ