ಕಿರುತೆರೆ ನಟ ಕಿರಣ್ ರಾಜ್ ವಿರುದ್ಧ ಮತ್ತೊಂದು ದೂರು


04-05-2018 473

ಬೆಂಗಳೂರು: ಮುಂಬಯಿ ಮೂಲದ ರೂಪದರ್ಶಿ ಜೊತೆ ಸಹಜೀವನ ನಡೆಸಿ ವಂಚಿಸಿ ಬಂಧಿತನಾಗಿರುವ ಕಿರುತೆರೆ ನಟ ಕಿರಣ್ ರಾಜ್ ವಿರುದ್ಧ ಇದೀಗ ಮತ್ತೊಂದು ದೂರು ದಾಖಲಾಗಿದೆ. ಈ ಹಿಂದೆ ಕಿರುಕುಳ ದೂರು ನೀಡಿದ್ದ ಯಾಸ್ಮಿನ್ ಅವರೇ ಇದೀಗ ಮತ್ತೊಂದು ದೂರು ದಾಖಲು ಮಾಡಿದ್ದಾರೆ. ಸಿನೆಮಾ ಕ್ಷೇತ್ರದಲ್ಲಿ ಒಳ್ಳೆಯ ಅವಕಾಶ ಕೊಡಿಸುವುದಾಗಿ ಕಿರಣ್ ರಾಜ್ ಪಾಸ್ ಪೋರ್ಟ್ ಪಡೆದಿದ್ದನು. ಆದರೆ ಈಗ ಪಾಸ್ ಪೋರ್ಟ್ ನೀಡದೆ ಕಿರಣ್ ರಾಜ್ ಮತ್ತು ಆತನ ಕುಟುಂಬ ಕಿರುಕುಳ ನೀಡುತ್ತಿದ್ದಾರೆ ಎಂದು ಯಾಸ್ಮಿನ್ ಆರೋಪಿಸಿದ್ದಾರೆ.

ಯಾಸ್ಮಿನ್ ವಿದೇಶಕ್ಕೆ ಚಿತ್ರೀಕರಣಕ್ಕೆಂದು ಹೋಗಬೇಕಿತ್ತು. ಹಾಗಾಗಿ ಕಿರಣ್ ಹತ್ತಿರ ತನ್ನ ಪಾಸ್ ಪೋರ್ಟ್ ಕೇಳಿದ್ದಾರೆ. ಆದರೆ ಕಿರಣ್ ಹಣದ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ್ದಾನೆ. ಕಿರಣ್ ರಾಜ್ ಪಾಸ್ ಪೋರ್ಟ್ ಕೊಡದ ಹಿನ್ನೆಲೆಯಲ್ಲಿ ಕೆಲಸ ಕೈ ತಪ್ಪಿದೆ ಎಂದು ಯಾಸ್ಮಿನ್ ತಿಳಿಸಿದ್ದಾರೆ.

ನನ್ನ ಮೇಲಿನ ದ್ವೇಷಕ್ಕೆ ನನಗೆ ಪಾಸ್‍ ಪೋರ್ಟ್ ಅನ್ನು ಸರಿಯಾದ ಸಮಯಕ್ಕೆ ಕೊಡದೇ ನನ್ನ ಕೆಲಸಕ್ಕೆ, ಜೀವನದ ಅತಿ ಮುಖ್ಯವಾದ ಕೆಲಸಕ್ಕೆ ತೊಂದರೆ ಕೊಡಬೇಕೆಂದು ಹಾಗೂ ಮೋಸ ಮಾಡಬೇಕೆಂಬ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಯಾಸ್ಮಿನ್ ದೂರಿನಲ್ಲಿ ತಿಳಿಸಿದ್ದಾರೆ. ಕಿರಣ್ ರಾಜ್ ವಿರುದ್ಧ 420, 506, 384 ಸೆಕ್ಷನ್ ಅಡಿಯಲ್ಲಿ ರಾಜಾರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

serial actor kiran Raj ಪಾಸ್‍ ಪೋರ್ಟ್ ತೊಂದರೆ