ಕಾಂಗ್ರೆಸ್ ವಿರುದ್ಧ ಅನಂತಕುಮಾರ್ ಟೀಕೆ


03-05-2018 446

ಬೆಂಗಳೂರು: ಬೆಂಗಳೂರಿನ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ಆರೋಪಿಸಿದ್ದಾರೆ. ಹಿಂದಿನ ಗೃಹ ಮಂತ್ರಿ ಕೆ.ಜೆ.ಜಾರ್ಜ್ ಹಾಗು ರಾಮಲಿಂಗಾರೆಡ್ಡಿ ರೆಡ್ಡಿ ಅವರ ಆಡಳಿತದಲ್ಲಿ, ಮೊಹಮ್ಮದ್ ಹ್ಯಾರಿಸ್ ಪ್ರಕರಣದಿಂದ ಬೆಂಗಳೂರಿನ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂದು ಅನಂತ್ ಕುಮಾರ್ ಟೀಕಿಸಿದರು.

ಬೆಂಗಳೂರು ನಗರದಲ್ಲಿ ನಾಗರಿಕರು ವಿಶೇಷವಾಗಿ ಮಹಿಳೆಯರು ಆತಂಕದಿಂದ ಬದುಕುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ದೂರಿದರು. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಗೂಂಡಾ ಸಂಸ್ಕೃತಿ ಬೇಕಾ ಅಥವಾ ಅಭಿವೃದ್ಧಿ ಬೇಕಾ? ಡಾನ್ ಸಂಸ್ಕೃತಿ ಬೇಕಾ ಅಥವಾ ಡೆವಲಪ್ಮೆಂಟ್ ಬೇಕಾ? ಎಂದು ಅನಂತ್ ಕುಮಾರ್ ಮತದಾರರನ್ನು ಪ್ರಶ್ನಿಸಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Ananth Kumar Don ಸಂಸ್ಕೃತಿ ಕೆ.ಜೆ.ಜಾರ್ಜ್