ನೀತಿ ಸಂಹಿತೆ: ಕೋಟ್ಯಾಂತಹ ಹಣ, ಚಿನ್ನಾಭರಣ ವಶ


30-04-2018 468

ಬೆಂಗಳೂರು: ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ನೀತಿ ಸಂಹಿತೆ ಉಲ್ಲಂಘಿಸಿದ ಇದುವರೆಗೂ 9127 ಕೇಸ್ಗಳು ದಾಖಲಾಗಿವೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ. 12.04 ಕೋಟಿ ದಾಖಲೆ ಇಲ್ಲದ ಹಣ ಸಿಕ್ಕಿದೆ. ಇಲ್ಲಿಯವರೆಗೂ 19.69ರಷ್ಟು ಮೊತ್ತವನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದೆ. 4.03 ಕೋಟಿಯಷ್ಟು ದಾಖಲೆಯಿಲ್ಲದ ಚಿನ್ನಾಭರಣಗಳನ್ನು ವಶಪಡಿಕೊಳ್ಳಲಾಗಿದೆ ಎಂದರು. 

ಖಾಸಗಿ ವಾಹಿನಿಗಳಲ್ಲಿ ಚುನಾವಣೆ ಸಂಬಂಧ ಸೀರಿಯಲ್ಸ್ ಹಾಗೂ ಸಿನಿಮಾ ಪ್ರದರ್ಶನಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಹೇಳಿದ್ದಾರೆ. ‘ಸುವಿಧಾ’ ಮುಖಾಂತರ ಈವರೆಗೆ ರ‍್ಯಾಲಿ, ಸಮಾವೇಶ, ಸೇರಿದಂತೆ ಪ್ರಚಾರ ವಾಹನ ಬಳಕೆ ಒಟ್ಟಾರೆ 9,517 ಅನುಮತಿ, ಪರವಾನಗಿ ನೀಡಲಾಗಿದೆ. ವಾಹನ, ಲೌಡ್ ಸ್ಪೀಕರ್ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಈ ಆ್ಯಪ್ ಮೂಲಕ ನೀಡಲಾಗಿದೆ ಎಂದರು.


ಒಂದು ಕಮೆಂಟನ್ನು ಬಿಡಿ