ಪ್ರಧಾನಿ ವಿರುದ್ಧ ಹೆಚ್.ಕೆ.ಪಾಟೀಲ್ ವಾಗ್ದಾಳಿ


30-04-2018 358

ಗದಗ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗದಗ್ ನಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ಬಗ್ಗೆ ವ್ಯಾಖ್ಯಾನಿಸುತ್ತಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಲೋಕಾಯುಕ್ತ ಸಾವಿರ ಪುಟಗಳ ವರದಿಕೊಟ್ಟರೂ ಕ್ರಮ ಕೈಗೊಂಡಿಲ್ಲ. ಹಲವು ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಕೊಡುತ್ತಿಲ್ಲ. ಸಿಬಿಐ ಸಂಸ್ಥೆಗೆ ತನಿಖೆ ಮುಂದುವರೆಸಲು ಆಗುತ್ತಿಲ್ಲ. ಕೇಂದ್ರದ ಪರವಾನಿಗೆ ಇಲ್ಲದ ಕಾರಣ ಪ್ರಕರಣಗಳ ಕುರಿತು ಕ್ರಮ ಕೈಗೊಳ್ಳಲು ಆಗುತ್ತಿಲ್ಲ ಎಂದು ದೂರಿದ್ದಾರೆ.

ಪ್ರಧಾನಿಯ ನೇರ ಉಸ್ತುವಾರಿಯಲ್ಲಿರುವ ಅಂಗ ಇಲಾಖೆಯಲ್ಲಿ ಸಿಬಿಐ ಬರುತ್ತದೆ. ಇಷ್ಟೆಲ್ಲಾ ಇದ್ದರೂ ಯಾವ ರೀತಿಯ ಬದ್ಧತೆಯಿಂದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತೀರಿ, ಇದರಿಂದ ಲೂಟಿಕೋರರಿಗೆ, ಭ್ರಷ್ಟರಿಗೆ ನೀವು ಬೆಂಬಲಿಸಿದಂತಾಗಲ್ವೆ ಎಂದು ಪ್ರಶ್ನಿಸಿದ್ದಾರೆ.

ಅಕ್ರಮ ಗಣಿಗಾರಿಕೆಯಲ್ಲಿ ಹಲವಾರು ಪ್ರಕರಣಗಳು ಲೋಕಾಯುಕ್ತ ನ್ಯಾಯಾಲಯದಲ್ಲಿವೆ. ತನಿಖೆಯನ್ನು ಸಿಬಿಐಗೆ ನೀಡಲಾಗಿದೆ. ಪ್ರಧಾನಿ ಉಸ್ತುವಾರಿಯಲ್ಲಿರುವ ಇಲಾಖೆ ತನಿಖೆಗೆ ಪರವಾನಿಗೆ ನೀಡುತ್ತಿಲ್ಲ, ಭ್ರಷ್ಟಾಚಾರದ ಬಗ್ಗೆ ರಾಜ್ಯದ ಜನರೆದುರು ಮಾತಾಡಲು ನಿಮಗೇನು ನೈತಿಕತೆ ಇದೆ. ಈ ಬಗ್ಗೆ ಪ್ರಧಾನಿ ರಾಜ್ಯದ ಜನರಿಗೆ ಉತ್ತರಿಸಬೇಕು. ಉತ್ತರ ನೀಡದಿದ್ದರೆ ರಾಜ್ಯದ ಜನರಿಗೆ ಮುಖ ತೋರುವ ನೈತಿಕತೆ ಪ್ರಧಾನಿಗಿಲ್ಲ ಎಂದಿದ್ದಾರೆ.

 

 

 

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

H.k patil Narendra Modi ಉಸ್ತುವಾರಿ ಲೂಟಿಕೋರ