ಎಚ್ಡಿಕೆ ಮೇಲೆ ಏಕವಚನದಲ್ಲಿ ಜಮೀರ್ ದಾಳಿ


30-04-2018 638

ಬೆಂಗಳೂರು: ಮಾಗಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ಪರ ಜಮೀರ್ ಅಹಮ್ಮದ್ ಬಿಡದಿ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ. ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಜಮೀರ್ ಅಹಮದ್ ಖಾನ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ನನ್ನ ಬಗ್ಗೆ ಮಾತನಾಡ್ಲಿಕ್ಕೆ ಅವ್ನು ಯಾರು? ನಾನು ರಾಮನಗರ, ಚನ್ನಪಟ್ಟಣಕ್ಕೆ ಬಂದು ಹೋದ ಮೇಲೆ ಹಣ ಹಂಚಿ ಜನ ಸೇರಿಸಿರೋದು ಯಾರು ? 22 ಲಕ್ಷ ಹಣ ಹಂಚಿ ಕುಮಾರಸ್ವಾಮಿ‌ ನಿನ್ನೆ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿದ್ದಾನೆ. ನಾನು ಬಂದಾಗ ತಡರಾತ್ರಿವರೆಗೂ ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಚನ್ನಪಟ್ಟಣದಲ್ಲಿ ಜಮಾಯಿಸಿದ್ದರು. ಕುಮಾರಸ್ವಾಮಿ ಹಣ‌ ಕೊಟ್ಟರೂ ಸೇರಿದ್ದು 200ಜನ ಮಾತ್ರ ಎಂದು ಜಮೀರ್ ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ‌ ಹಣಕೊಟ್ಟು ಜನ ಸೇರಿಸ್ತಾನೆ, ಆತನ ಅಭಿಮಾನಕ್ಕೆ ಜನ ಸೇರೋದಿಲ್ಲ. ನಾನು ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡಿಲ್ಲ, ರಾಜ್ಯದ 25 ಕ್ಷೇತ್ರದಲ್ಲಿ ಈವರೆಗೆ ಪ್ರಚಾರ ಮಾಡಿದ್ದೇನೆ. ಮೈಸೂರು ಭಾಗದಲ್ಲಿ ನನ್ನ ಸಮುದಾಯದ ಜನ ನನ್ನ ನಂಬಿ ಕಾಂಗ್ರೆಸ್ ಸೇರೋದನ್ನ ನೋಡಿ, ನನ್ನ ಸಮುದಾಯದ ಜನರನ್ನ ತುರುಕರು ಕಾಸುಕೊಟ್ರೆ ಬರ್ತಾರೆ ಅಂತ ಜರಿದಿದ್ದಾರೆ. ನನ್ನ ಜನ ಕಾಸಿಗೆ ಬದುಕಿಲ್ಲ. ಕೊಂಡುಕೊಳ್ಳಲು ಅವ್ನು ಯಾರು. ಈಗ ಮುಸ್ಲಿಂರನ್ನ ಜರಿದು ಈಗ ನಾನು ಮಾತನಾಡಿಲ್ಲ ಅಂತಾರೆ. ಅವರದು ಹಿಟ್ ಅಂಡ್ ರನ್ ಕೇಸ್ ಇದ್ದಂತೆ. ಯಾವುದನ್ನ ಅವರು ಹೇಳಿ ಒಪ್ಪಿಕೊಂಡಿದ್ದಾನೆ. ಹೇಳೋದನ್ನ ಹೇಳಿ ನಂತರ ನಾನು ಹೇಳೇ ಇಲ್ಲ ಅಂತಾರೆ. ಅಮಿತ್ ಷಾ ಭೇಟಿ ವಿಚಾರ ಕೇಳಿದ್ರೆ ಯಾಕೆ ಕುಮಾರಸ್ವಾಮಿ ಬ್ಯಾ ಬ್ಯಾ ಅಂತಿಲ್ವಾ, ಹೇಳಿದ್ದನ್ನ ಅವರು ಅವರ ಜಮಾನ್ದಲ್ಲಿ ಸಮರ್ಥನೆ ಮಾಡಿಕೊಂಡಿಲ್ಲ ಎಂದು ಜಮೀರ್ ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

 


ಒಂದು ಕಮೆಂಟನ್ನು ಬಿಡಿ