ಮಹಿಳಾ ಮತಗಳನ್ನು ಸೆಳೆಯಲು ಬಿಜೆಪಿ ಪ್ಲಾನ್!


28-04-2018 481

ಬೆಂಗಳೂರು: ಮಹಿಳೆಯರ ಮತಗಳನ್ನು ಸೆಳೆಯಲು ಪ್ಲಾನ್ ಮಾಡಿರುವ ಬಿಜೆಪಿ, ಇಂದು ಬಿಜೆಪಿ ಮಹಿಳಾ ಶಕ್ತಿ ಪ್ರದರ್ಶನ ನಡೆಸಲಿದೆ. ಕರುನಾಡ ಮಹಿಳಾ ಜಾಗೃತಿ ಹೆಸರಲ್ಲಿ ರಾಜ್ಯದ ವಿವಿಧೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬಿಜೆಪಿ ರಾಷ್ಟ್ರೀಯ ಘಟಕದ ಪ್ರಮುಖ ಮಹಿಳೆಯರು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಬೆಂಗಳೂರಿನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಬೆಳಗಾವಿಯಲ್ಲಿ ಜವಳಿ ಸಚಿವೆ ಸ್ಮೃತಿ ಇರಾನಿ, ಕಲಬುರಗಿಯಲ್ಲಿ ಆಹಾರ ಸಂಸ್ಕರಣಾ ಉದ್ಯಮ ರಾಜ್ಯ ಸಚಿವೆ ಸಾಧ್ವಿ ನಿರಂಜನ್‌, ಮಂಗಳೂರಿನಲ್ಲಿ ಸಂಸದೆ ಮೀನಾಕ್ಷಿ ಲೇಖಿ, ಬೀದರ್ ನಲ್ಲಿ ಮಹರಾಷ್ಟ್ರ ಗ್ರಾಮಿಣಾಭಿವೃದ್ಧಿ ಸಚಿವೆ ಪಂಕಜಾ ಮುಂಡೆ, ರಾಯಚೂರಿಗೆ ರಾಷ್ಟ್ರೀಯ ಮಹಿಳಾ ಮೋರ್ಚಾ ಪ್ರಭಾರಿ ಡಿ.ಪುರಂದರೇಶ್ವರಿ ಆಗಮಿಸಲಿದ್ದಾರೆ. ಈ ವೇಳೆ ಮಹಿಳೆಯರೊಂದಿಗೆ ಸಂವಾದ, ಮಹಿಳೆಯರ ಸುರಕ್ಷತೆಗೆ ಬಿಜೆಪಿ ಕೈಗೊಂಡಿರುವ ಕ್ರಮಗಳನ್ನು ಬಿಂಬಿಸಲು ಮುಂದಾಗಿದ್ದಾರೆ.


ಒಂದು ಕಮೆಂಟನ್ನು ಬಿಡಿ