ಅಪಘಾತ ಎಸಗಿ ಪರಾರಿ: ವಿದ್ಯಾರ್ಥಿ ಸಾವು


26-04-2018 483

ಬೆಂಗಳೂರು: ಚಿಕ್ಕಜಾಲದ ಗೋಪಾಲಪುರದ ಬಳಿ ನಿನ್ನೆ ರಾತ್ರಿ ಬುಲೆಟ್‍ನಲ್ಲಿ ವೇಗವಾಗಿ ಹೋಗುತ್ತಿದ್ದ ಎಂಬಿಎ ವಿದ್ಯಾರ್ಥಿ ಆಕಾಶ್ ಎಂಬುವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೈಲಹಳ್ಳಿಯ ಜೆಮ್ಸ್ ಬ್ಯುಸಿನೆಸ್ ಕಾಲೇಜಿನಲ್ಲಿ ಎಂಬಿಎ ಓದುತ್ತಿದ್ದ ಹುಬ್ಬಳ್ಳಿ ಮೂಲದ ಆಕಾಶ್(24) ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ಉಳಿದುಕೊಂಡಿದ್ದ ಆಕಾಶ್, ರಾತ್ರಿ 9.20ರ ವೇಳೆ ಬಾಗಲೂರು ಬೂದಿಗೆರೆ ರಸ್ತೆಯಲ್ಲಿ ವೇಗವಾಗಿ ಬೈಕ್‍ನಲ್ಲಿ ಹೋಗುತ್ತಿದ್ದರು.

ಮಾರ್ಗ ಮಧ್ಯೆ ಗೋಪಾಲಪುರದ ಬಳಿ ಅಪಘಾತ ಸಂಭವಿಸಿದೆ. ಆದರೆ ಡಿಕ್ಕಿ ಹೊಡೆದ ವಾಹನ ಯಾವುದೆಂದು ತಿಳಿದು ಬಂದಿಲ್ಲ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅಪಘಾತವೆಸಗಿದ ವಾಹನ ಸವಾರ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿರುವ ಚಿಕ್ಕಜಾಲ ಸಂಚಾರ ಪೊಲೀಸರು ಪರಾರಿಯಾದ ವಾಹನ ಹಾಗೂ ಅದರ ಚಾಲಕನಿಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಸಾರಾ ಫಾತಿಮಾ ತಿಳಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Road student ಅಪಘಾತ ಚಿಕಿತ್ಸೆ