2ಸಾವಿರಕ್ಕೂ ಅಧಿಕ ಸೀರೆಗಳ ವಶ


26-04-2018 292

ಹುಬ್ಬಳ್ಳಿ: ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಾರ್ವಜನಿಕ ಸ್ಥಳದಲ್ಲಿ ಲಘು ಉಪಹಾರ ಏರ್ಪಾಡು ಮಾಡಿ, ಹಂಚಿಕೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಬಿಜೆಪಿ ಕಾರ್ಪೊರೇಟರ್ ಕಮಾಲಾಕ್ಷಿ ಪತಿ ಅಂದಾನಪ್ಪಾ ಸಜ್ಜನರ, ಉಪಹಾರ ಏರ್ಪಾಡು ಮಾಡಿದ್ದರು ಎಂದು ತಿಳಿದು ಬಂದಿದೆ. ಪಾಲಿಕೆ ಸದಸ್ಯೆ ಹಾಗು ಅಂದಾನಪ್ಪಾ ಸಜ್ಜನರ ಪತ್ನಿ ಕಮಾಲಾಕ್ಷಿಯೂ ಸಹ ಇದರಲ್ಲಿ ಭಾಗಿಯಾಗಿದ್ದರು. ಇಂದಿರಾ ಗ್ಲಾಸ್ ಹೌಸ್ ಆವರಣದಲ್ಲಿ ವಾಯು ವಿಹಾರಿಗಳಿಗೆ ಉಪ್ಪಿಟ್ಟು ಮತ್ತು ಇಡ್ಲಿ-ವಡಾ, ತಂಪು ಪಾನೀಯ ಹಂಚಿಕೆ  ಮಾಡಲಾಗಿದೆ.

ಇನ್ನೊಂದೆಡೆ ತುಮಕೂರಲ್ಲಿ ಮತದಾರರಿಗೆ ಹಂಚಲು ತಂದಿದ್ದ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಕುಣಿಗಲ್ ತಾಲ್ಲೂಕಿನ ಜಲದೀಗೆರೆಯಲ್ಲಿ ವಶ ಪಡಿಸಿಕೊಳ್ಳಲಾಗಿದ್ದು, ಕಾಂಗ್ರೆಸ್ ಮುಖಂಡ ವೆಂಕಟೇಶ್ ಎಂಬುವವರ ತೋಟದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 2000ಕ್ಕೂ ಹೆಚ್ಚು ಸೀರೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

sarees code of conduct ಉಪಹಾರ ಮತದಾರ