ಶ್ರೀರಾಮುಲು ಪರ ಜನಾರ್ಧನ ರೆಡ್ಡಿ ಪ್ರಚಾರ


25-04-2018 472

ಬಳ್ಳಾರಿ: ಶ್ರೀರಾಮುಲು ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸಿದ್ದು, ಮೊಳಕಾಲ್ಮೂರು ಕ್ಷೇತ್ರದಲ್ಲಿ ಐತಿಹಾಸಿಕ ಗೆಲುವು ಸಾಧಿಸಲಿದ್ದಾರೆ , ಸಿಎಂ ಅವರನ್ನು ಸೋಲಿಸುವ ವ್ಯಕ್ತಿ ಶ್ರೀರಾಮುಲು ಎಂದು ಮೊಳಕಾಲ್ಮೂರಿನ ಕೋನಾಪುರದಲ್ಲಿ ಮಾಜಿ ಸಚಿವ ಜನಾರ್ಧನರೆಡ್ಡಿ ಹೇಳಿದ್ದಾರೆ.

ಸಿಎಂ ಬರೀ ಸುಳ್ಳು ಹೇಳುತ್ತಾರೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೆದರಿ ಬದಾಮಿಗೆ ಸಿಎಂ ಹೋಗಿದ್ದಾರೆ. ಅವರು ಸಿದ್ದರಾಮಯ್ಯ ಅಲ್ಲ, ಸಿದ್ದರಾವಣ, ರಾವಣ ಸಂಹಾರಕ್ಕೆ ರಾಮುಲು ಮಹಿಷಾಸುರನಾಗಿದ್ದಾರೆ. ಸಿಎಂ ಮೋಸಗಾರ, ಸುಳ್ಳುಗಾರ, ಜನಪರ ಅಲ್ಲ ಎಂದು ಟೀಕಿಸಿದ್ದಾರೆ.

ನಮಗೆ ಬಳ್ಳಾರಿ ಕನಕ ದುರ್ಗಮ್ಮ ಆಶೀರ್ವಾದ ಇದೆ, ಶ್ರೀರಾಮುಲು ಗೆಲುವು ಐತಿಹಾಸಿಕ ಗೆಲುವು ಆಗಲಿದ್ದು, ಇತಿಹಾಸದ ಪುಟದಲ್ಲಿ ಉಳಿಯಲಿದೆ, ಶ್ರೀರಾಮುಲು ಪರ ಜನರ ಪ್ರೀತಿ ಎರಡೂ ಕ್ಷೇತ್ರದಲ್ಲಿ ಇದೆ. ತಾನು ಮೊಳಕಾಳ್ಮೂರಲ್ಲೇ ಇದ್ದು ರಾಮುಲು ಪರ ಪ್ರಚಾರ ಮಾಡುವುದಾಗಿ ತಿಳಿಸಿದ್ದಾರೆ.

ರಾಮುಲುಗೆ ಎರಡೂ ಕಡೆ ಟಿಕೆಟ್ ಸಿಕ್ಕಿದೆ ಅಂದರೆ ಅದು ಅವರ ವೈಯಕ್ತಿಕ ವರ್ಚಸ್ಸು. ನಿಜವಾದ ಹಿಂದುಳಿದ ನಾಯಕ ಶ್ರೀರಾಮುಲು ಸಿಎಂ ಅಲ್ಲ ಎಂದ ಅವರು, ಬಿಎಸ್ವೈ ಪುತ್ರ ವಿಜಯೇಂದ್ರನಿಗೆ ಟಿಕೆಟ್ ಕೈತಪ್ಪಿದ ವಿಚಾರವಾಗಿ, ಇದು ಹೈ ಕಮಾಂಡ್ಗೆ ಬಿಟ್ಟಿ ವಿಚಾರ ಎಂದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

B. Sriramulu G. Janardhana Reddy ಟಿಕೆಟ್ ವಿಜಯೇಂದ್ರ