ರಾಜ್ಯ ಬಿಜೆಪಿ ಅಭ್ಯರ್ಥಿಗಳೊಂದಿಗೆ ಮೋದಿ ಟೆಲಿಕಾನ್ಫರೆನ್ಸ್!


24-04-2018 230

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ, ರಾಜ್ಯದ ಎಲ್ಲಾ 224 ಕ್ಷೇತ್ರಗಳ ಮೇಲೆ ಪ್ರಧಾನಿ ಮೋದಿ ಕಣ್ಣಿಟ್ಟಿದ್ದಾರೆ. 224 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಜೊತೆ ಮೋದಿ ಸಂಪರ್ಕಕ್ಕೆ ಬರಲಿದ್ದು, ಏಪ್ರಿಲ್​ 26ರಂದು ಅಭ್ಯರ್ಥಿಗಳ ಜೊತೆ ಪ್ರಧಾನಿ ಮೋದಿ ಟೆಲಿಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲಿದ್ದಾರೆ. ಮೋದಿ ಆಪ್ ಮೂಲಕ 224 ಅಭ್ಯರ್ಥಿಗಳ ಜೊತೆ ಮೋದಿ ಟಾಕ್.

ಎಪ್ರಿಲ್ 26ರಂದು ಬೆಳಿಗ್ಗೆ 9 ರಿಂದ 10ಕ್ಕೆ ಮೋದಿ ಮಾತನಾಡಲಿದ್ದು, 30 ನಿಮಿಷಗಳ ಕಾಲ ಟೆಲೆಕಾನ್ಫರೆನ್ಸ್ ನಡೆಸಲಿದ್ದಾರೆ. ಪ್ರತಿಯೊಂದು ಕ್ಷೇತ್ರದ ಸಂಪೂರ್ಣ ಮಾಹಿತಿ ಹೊಂದಿರುವ ಪ್ರಧಾನಿ ಮೋದಿ, ಚುನಾವಣೆ ಸಿದ್ಧತೆ, ಬೂತ್ ಸಶಕ್ತೀಕರಣ, ಕ್ಷೇತ್ರದಲ್ಲಿ ವಿಪಕ್ಷಗಳ ರಣತಂತ್ರಗಳ ಕುರಿತು ಮಾತನಾಡಲಿದ್ದಾರೆ ಎಂದು ತಿಳಿದು ಬಂದಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

narendra modi teleconference ಸಶಕ್ತೀಕರಣ ರಣತಂತ್ರ