ವಿಜಯೇಂದ್ರ ಅಭಿಮಾನಿಯಿಂದ ಆತ್ಮಹತ್ಯೆ ಬೆದರಿಕೆ


24-04-2018 426

ಮೈಸೂರು: ಮೈಸೂರಿನ ವರುಣಾ ಮತಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧಿಸುತ್ತಿಲ್ಲ ಎಂದು ನಿನ್ನೆ ಬಿ.ಎಸ್.ಯಡಿಯೂರಪ್ಪ ಹೇಳುತ್ತಿದ್ದಂತೆ ಭಾರೀ ಗದ್ದಲ ಸೃಷ್ಟಿಯಾಗಿತ್ತು, ಅಭಿಮಾನಿಗಳು ರೋಚ್ಚಿಗೆದ್ದು, ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಬೂಕನಕೆರೆ ಅಭಿಮಾನಿಯಾದ ಮಧುಸೂದನ್ ಎಂಬಾತ   ವಿಯಯೇಂದ್ರ ಅವರಿಗೆ ಟಿಕೆಟ್ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಬಿಜೆಪಿ ವರಿಷ್ಠರಿಗೆ ಮಧ್ಯಾಹ್ನದವರೆಗೂ ಗಡುವು ನೀಡಿರುವ ಅಭಿಮಾನಿ. ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾನೆ. ಆತ್ಮಹತ್ಯೆ ಬೆದರಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

BY Vijayendra B.S.Yeddyurappa ಮತಕ್ಷೇತ್ರ ಟಿಕೆಟ್