ಶಾಸಕ ಸಂಜಯ ಪಾಟೀಲ ವಿರುದ್ಧ ಎಫ್ಐಆರ್


20-04-2018 345

ಬೆಳಗಾವಿ: ಚುನಾವಣಾ ಪ್ರಚಾರದಲ್ಲಿ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಶಾಸಕ ಸಂಜಯ ಪಾಟೀಲ ವಿವಾದಾತ್ಮಕ ಹೇಳಿಕೆ ಕುರಿತು, ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಮು ಸೌಹಾರ್ದತೆಗೆ ಧಕ್ಕೆ, ಪ್ರಚೋದನಾಕಾರಿ ಭಾಷಣ ಹಿನ್ನೆಲೆ, ಚುನಾವಣಾ ಅಧಿಕಾರಿ ಐಪಿಸಿ 153(A), 259(A), ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬೆಳಗಾವಿ ತಾಲ್ಲೂಕಿನ ಸುಳೇಭಾವಿ ಗ್ರಾಮದ ಸಾರ್ವಜನಿಕ ಸಭೆಯಲ್ಲಿ, ನಾವು ರಾಮ ಮಂದಿರವನ್ನು ನಿರ್ಮಿಸುತ್ತೇವೆ, ಕಾಂಗ್ರೆಸ್ ನವರು ಟಿಪ್ಪು ಸುಲ್ತಾನ್ ಜಯಂತಿ ಮಾಡುತ್ತಾರೆ, ಬಾಬ್ರಿ ಮಸೀದಿ ನಿರ್ಮಿಸುವರು ಎಂಬ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು.


ಒಂದು ಕಮೆಂಟನ್ನು ಬಿಡಿ