ಕಾಂಗ್ರೆಸ್ ವಿರುದ್ಧ ಅನಂತ ಕುಮಾರ್ ಹೆಗಡೆ ವಾಗ್ದಾಳಿ


19-04-2018 513

ಉತ್ತರ ಕನ್ನಡ: ಕರ್ನಾಟಕ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಭ್ರಷ್ಟಾಚಾರ ಮಿತಿ ಮೀರಿದ್ದು ಅಭಿವೃದ್ಧಿ ಸಂಪೂರ್ಣ ನಿಂತು ಹೋಗಿದೆ. ಇದನ್ನೇ ಮಾನದಂಡವನ್ನಾಗಿಟ್ಟುಕೊಂಡು ಚುನಾವಣೆ ಎದುರಿಸಲಿದ್ದೇವೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.

ಹಳಿಯಾಳ ಪಟ್ಟಣದಲ್ಲಿ ಅಭ್ಯರ್ಥಿ ಸುನಿಲ್ ಹೆಗಡೆ ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಅವರು, ಸಿದ್ದರಾಮಯ್ಯ ಹಣ ತಂದಿದ್ದೇನೆ ಅಂತಾರೇ ಎಲ್ಲಿ ಹೋಗಿದೆ ಹಣ? 2.5 ಲಕ್ಷ ಕೋಟಿ ಹಣವನ್ನು ಕೊಟ್ಟಿದ್ದೇವೆ. ಅನ್ನಭಾಗ್ಯ ನನ್ನದು ನನ್ನ ಸಾಹುಕಾರನದು ಸೇರಿ 101 ರೂಪಾಯಿ ಎನ್ನುವಂತೆ ಕೇಂದ್ರದ ಅನುದಾನವನ್ನು ಇಟ್ಟುಕೊಂಡು ನಾಟಕ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಎಲ್ಲಿಯವರೆಗೆ ಈ ದೇಶದಲ್ಲಿ ಇರುತ್ತದೆಯೋ ದೇಶ ಉದ್ಧಾರ ಆಗೋಲ್ಲ. ಪೂರ್ಣ ಪ್ರಮಾಣದ ಸರ್ಕಾರ ಕೊಡಿ ಅಭಿವೃದ್ದಿ ತೋರಿಸ್ತೇವೆ. ಕಾಂಗ್ರೆಸ್ ನವರು ಬಿಜೆಪಿ ಅಭಿವೃದ್ದಿ ನೋಡಿ ಅಲ್ಲಾಡಿ ಹೋಗಿದ್ದಾರೆ. ಭ್ರಷ್ಟಾಚಾರ ಕಡಿಮೆ ಆಗಲು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬರಬೇಕು ಎಂದು ಹೇಳಿದ್ದಾರೆ.

 

 

 

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Anant Kumar Hegde karnataka ದಿವಾಳಿ ಅನುದಾನ