ನಟಿ ಅಮೂಲ್ಯ ಜೆಡಿಎಸ್ ಸೇರ್ಪಡೆ


17-04-2018 591

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಅಮೂಲ್ಯ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಗರದದ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಸೇರ್ಪಡೆಯಾಗಿದ್ದಾರೆ. ಇನ್ನು ಮುಂದೆ ಜೆಡಿಎಸ್ ನ ಸ್ಟಾರ್ ಕ್ಯಾಂಪೇನರ್ ಆಗಲಿದ್ದಾರೆ ನಟಿ ಅಮೂಲ್ಯ.

ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್.ಡಿ.ದೇವೇಗೌಡರು ಇದು ಅತ್ಯಂತ ಸಂತೋಷದ ದಿನ. ಹಲವು ಪ್ರಭಾವಿಗಳು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ದಿನೇ ದಿನೇ ಪಕ್ಷ ಬಲಿಷ್ಠ ಆಗುತ್ತಿದೆ. ಜನರ ಆಶೀರ್ವಾದ ಕುಮಾರಸ್ವಾಮಿಗೆ ಸಿಗುತ್ತಿದೆ. ಈ ಬಾರಿ  ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನೂ ಎರಡು ಮೂರು ದಿನಗಳಲ್ಲಿ ಪಕ್ಷಕ್ಕೆ ಹಲವು ಜನ ಸೇರಲಿದ್ದಾರೆ. ಬೆಂಗಳೂರಿನ 28 ವಿಧಾನ ಸಭಾ ಕ್ಷೇತ್ರಗಳಲ್ಲಿ10-12 ಕ್ಷೇತ್ರ ಗೆಲ್ಲುತ್ತೇವೆ, ಜೆಡಿಎಸ್ಗೆ ಪ್ರಭಾವಿಗಳು ಸೇರ್ಪಡೆ ಆಗಿರೋದೆ ಇದಕ್ಕೆ ಕಾರಣ ಎಂದಿದ್ದಾರೆ. ರಾಜ್ಯದಲ್ಲಿ ಅತ್ಯಂತ ಕೀಳು ಮಟ್ಟದ ಆಡಳಿತ ಇದೆ, ಹೀಗಾಗಿ ಪಕ್ಷ ಅಧಿಕಾರಕ್ಕೆ ಬಂದರೂ ಅದನ್ನ ಸರಿಪಡಿಸಲು ಒಂದು ವರ್ಷ ಬೇಕು, ನಾನು ನಿಮ್ಮ ನಡುವೆ ಇದ್ದು ಸಲಹೆ ನೀಡುತ್ತೇನೆ ಎಂದು ಹೇಳಿದರು.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

amulya JDS ಆಶೀರ್ವಾದ ಹೆಚ್.ಡಿ.ದೇವೇಗೌಡ