‘ಅಭ್ಯರ್ಥಿಗಳ ಆಯ್ಕೆ ನ್ಯಾಯಸಮ್ಮತವಾಗಿ ನಡೆದಿದೆ’


16-04-2018 299

ಮಂಗಳೂರು: ನಿನ್ನೆಯಷ್ಟೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಟಿಕೆಟ್ ಕೈತಪ್ಪಿದ ಮುಖಂಡರು ಅಸಮಾದಾನ ವ್ಯಕ್ತಪಡಿದ್ದಾರೆ. ಇದರ ಬೆನ್ನಲ್ಲೇ ಮಂಗಳೂರಲ್ಲಿ ಮಾತನಾಡಿದ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ಎಷ್ಟು ದೊಡ್ಡ ಪಕ್ಷದಲ್ಲೂ ಈ ರೀತಿಯ ಭಿನ್ನಾಭಿಪ್ರಾಯ ಇರತ್ತದೆ. ಅಭ್ಯರ್ಥಿಗಳ ಆಯ್ಕೆಗೆ ಅರ್ಜಿ ಕರೆದು ನ್ಯಾಯಸಮ್ಮತ ಆಯ್ಕೆ ನಡೆದಿದೆ, ಟಿಕೆಟ್ ಸಿಗದೇ ಇದ್ದವರಿಗೂ ಮುಂದೆ ಅವಕಾಶ ಕೊಡುತ್ತೇವೆ ಎಂದು ಹೇಳಿದ್ದಾರೆ. ಜಿಲ್ಲೆಯಲ್ಲಿ ಏಳು ಜನ ಹಾಲಿ ಶಾಸಕರಿಗೆ ಮತ್ತೆ ಟಿಕೆಟ್ ಕೊಡಲಾಗಿದೆ ಎಂದರು.

ನಾನು ಕೂಡ ಒಬ್ಬ ಆಕಾಂಕ್ಷಿಯಾಗಿದ್ದೆ, ಆದರೆ ಟಿಕೆಟ್ ಸಿಗಲಿಲ್ಲ ಅಂತ ಬೇಜಾರಿಲ್ಲ, ಅಭಯಚಂದ್ರ ಜೈನ್ ನಿಲ್ಲೋದಿಲ್ಲ ಅಂದಾಗ ಟಿಕೆಟ್ ಗಾಗಿ ಅರ್ಜಿ ಹಾಕಿದ್ದೆ, ಆದರೆ ಅವರು ಮತ್ತೆ ಟಿಕೆಟ್ ಕೇಳಿದಾಗ ಅವರಿಗೆ ಪಕ್ಷ ಟಿಕೆಟ್ ಕೊಟ್ಟಿದೆ. ಹಾಗಾಗಿ ಅವರ ಗೆಲುವಿಗೆ ಹಾರೈಸಿ ಪಕ್ಷಕ್ಕಾಗಿ ಅಲ್ಲಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಹಾಲಿ ಶಾಸಕರಿಗೆ ಟಿಕೆಟ್ ಕೊಡಬೇಕು ಅನ್ನೋದು ಪಕ್ಷದ ತೀರ್ಮಾನ, ಅಭಯ್ ಅವರು ನಿಲ್ಲದಿದ್ದರೇ ನಿನ್ನನ್ನು ಪರಿಗಣಿಸುವುದಾಗಿ ಸಿಎಂ ಹೇಳಿದ್ದರು.

ಚುನಾವಣಾ ಆಯೋಗದ ನಿಯಮ ಈ ಜಿಲ್ಲೆಯಲ್ಲಿ ಮಿತಿ ಮೀರಿದೆ ಅನಿಸುತ್ತೆ ಎಂದು ಅಭಿಪ್ರಾಯ ಪಟ್ಟ ಅವರು, ಮದುವೆ, ಧಾರ್ಮಿಕ ಸೇರಿ ಹಲವು ಕಾರ್ಯಕ್ರಮಗಳಿಗೆ ಅತಿಯಾದ ನಿರ್ಬಂಧನೆ ಹಾಕುತ್ತಿದ್ದಾರೆ, ನನ್ನ 30 ವರ್ಷದ ರಾಜಕೀಯ ಜೀವನದಲ್ಲಿ ಇಂಥ ನೀತಿ ಸಂಹಿತೆ ನೋಡಿಲ್ಲ. ನಾವು ತುರ್ತು ಪರಿಸ್ಥಿತಿಯಲ್ಲಿ ಇದ್ದೇವಾ ಅನ್ನೋ ಪ್ರಶ್ನೆ ಮೂಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Ivan DSouza Ticket ಅಭಿಪ್ರಾಯ ಆಯೋಗ