‘ಸಂವಿಧಾನವನ್ನು ಎಲ್ಲರೂ ‌ಪಾಲಿಸಬೇಕು’


14-04-2018 460

ಬೆಂಗಳೂರು: ಅಂಬೇಡ್ಕರ್ ಜಯಂತಿ ಹಿನ್ನೆಲೆ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ, ಡಾ. ಬಿ.ಆರ್ ಅಂಬೇಡ್ಕರ್ ಒಬ್ಬ ಮಹಾನ್ ಮಾನವತಾವಾದಿ. ಈ ದೇಶಕ್ಕೆ ಯಾರೂ‌ ಕೊಡದಂತಹ‌ ಕೊಡುಗೆಯನ್ನ ಅಂಬೇಡ್ಕರ್ ನೀಡಿದ್ದಾರೆ. ಸಂವಿಧಾನವನ್ನು ರಚಿಸಿದ ಕೀರ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರದ್ದು. ಪ್ರಪಂಚದಲ್ಲಿ ಎಲ್ಲೂ ‌ಇಲ್ಲದ ವಿಶಿಷ್ಟ ಸಂವಿಧಾನವನ್ನು ಅಂಬೇಡ್ಕರ್ ರಚಿಸಿದ್ದಾರೆ ಎಂದರು.

ನಮ್ಮ ಸಂವಿಧಾನವನ್ನು ಎಲ್ಲರೂ ‌ಕೂಡ ಪಾಲಿಸಬೇಕು. ಅಂಬೇಡ್ಕರ್ ರವರ ಆಶಯವನ್ನು ನಮ್ಮ ಪಕ್ಷ ಪಾಲಿಸಿದೆ. ಶೋಷಿತರು ದಮನಿತರ ಅಭಿವೃದ್ಧಿಗಾಗಿ ನಾವು ಸಾಕಷ್ಟು ಕೆಲಸ ಕಾರ್ಯಗಳನ್ನ ಮಾಡಿದ್ದೇವೆ. ಚುನಾವಣಾ ಸಂದರ್ಭದಲ್ಲಿ ಓಟಿಗಾಗಿ ಬೇರೆ ಪಕ್ಷದವರು ಅಂಬೇಡ್ಕರ್ ಜಯಂತಿ ಆಚರಿಸುತ್ತಾರೆ. ಆದರೆ ಅಂಬೇಡ್ಕರ್ ರವರ ಆಶಯಗಳನ್ನು ಪಾಲಿಸಿದ್ದು ಕಾಂಗ್ರೆಸ್ ನವರು, ಬಿಜೆಪಿಯವರಲ್ಲ, ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

H. Anjaneya KPCC ಜಯಂತಿ ಸಂವಿಧಾನ