ಬೀದಿ ಬದಿ ವ್ಯಾಪಾರಿ ಮಹಿಳೆ ಮೇಲೆ ಪಿಎಸ್ಐ ದರ್ಪ


14-04-2018 567

ಬಳ್ಳಾರಿ: ತನ್ನ ವಿರುದ್ಧ ದಾಖಲಿಸಿರುವ ಪ್ರಕರಣ ಹಿಂಪಡೆಯುವಂತೆ ಮಹಿಳೆಯೊಬ್ಬರಿಗೆ ಪಿಎಸ್ಐ ಒತ್ತಡ ಹಾಕುತ್ತಿರುವುದು ಬೆಳಕಿಗೆ ಬಂದಿದೆ. ಬಳ್ಳಾರಿಯ ಖಾನಾಹೊಸಳ್ಳಿಯ ಪಿಎಸ್ಐ ಬೀದಿ ಬದಿಯ ವ್ಯಾಪಾರಿ ಮಹಿಳೆಯ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣ ಇದಾಗಿದೆ. ಬೀದಿ ಬದಿ ವ್ಯಾಪಾರಿ ಶಿಲ್ಪಾ ಮತ್ತು ಪತಿ ನಾಗರಾಜ್ ರ ಮೇಲೆ ಹಲ್ಲೆಗೆ ಮುಂದಾಗಿದ್ದ ಪಿಎಸ್ಐ ಕೃಷ್ಣಾನಾಯ್ಕ್ ಹಾಗೂ ಎಎಸ್ಐ ನಾಗರಾಜ್ ಅವರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ದೂರು ಹಿಂಪಡೆಯುವಂತೆ ಒತ್ತಡ ಹೇರುತ್ತಿದ್ದಾರೆ. ನಿಮಗೇನು ಬೇಕು ಕೆಲಸ ನಾನು ಮಾಡಿಸಿಕೊಡುವೆ ಎಂದು ಆಮಿಷ ಒಡ್ಡಿರುವುದಾಗಿರೂ ತಿಳಿದು ಬಂದಿದೆ. ಕೂಡ್ಲಿಗಿ ತಾಲ್ಲೂಕಿನಲ್ಲಿ ನನಗೊಂದು ಇಮೇಜ್ ಇದೆ, ಐದಾರು ಸ್ಟೇಷನ್ ಗಳಲ್ಲಿ ಕೆಲಸ ಮಾಡಿದ್ದೇನೆ, ಕೇಸು ವಾಪಾಸ್ ಪಡೆಯಿರಿ ಎಂದು ಹೇಳಿರುವ ಆಡಿಯೋ ಕೂಡ ಲಭ್ಯವಾಗಿದೆ. ಈ ಕುರಿತು ಪೊಲೀಸ್ ಮಹಾನಿರ್ದೇಶಕರಿಗೂ ದಂಪತಿ ದೂರು ನೀಡಿದ್ದಾರೆ. ನಮ್ಮ ಕುಟುಂಬಕ್ಕೆ ಏನಾದರೂ ಆದರೆ ಪಿಎಸ್ಐ ಕೃಷ್ಣಾನಾಯ್ಕ್, ಎಎಸ್ಐ ನಾಗರಾಜ್ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

PSI case ಮಹಾನಿರ್ದೇಶಕ ಆಮಿಷ