ಕುಖ್ಯಾತ ಸರಗಳ್ಳರ ಬಂಧನ

ಹೆಣ್ಣೂರು ಪೊಲೀಸರು ಕಾರ್ಯಚರಣೆ ನಡೆಸಿ ಕುಖ್ಯಾತ ಸರಗಳ್ಳರ ಬಂಧಿಸಿದ್ದಾರೆ. ಬಂಧಿತರಿಂದ 3.80 ಲಕ್ಷ ಮೌಲ್ಯದ 6 ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ. ಸಾಹೇಲ್ ಪಾಷಾ,ಅಲೀಂ ಖಾನ್, ಶಫೀಕ್ ಅಹಮದ್ ಬಂಧಿತರಾಗಿದ್ದು ಈ ಮೂವರು ಒಂಟಿ ಮಹಿಳೆಯರ ಸರ ಕಿತ್ತು ಪರಾರಿಯಾಗುತ್ತಿದ್ದ ಆರೋಪಿಗಳು ಎನ್ನಲಾಗಿದೆ. ಕೃತ್ಯಕ್ಕೆ ಬಳಸುತ್ತಿದ್ದ ಬೈಕ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಒಂದು ಕಮೆಂಟನ್ನು ಬಿಡಿ