ಸಿನಿಮೀಯ ರೀತಿ ದರೋಡೆ: ಇಬ್ಬರ ಬಂಧನ


11-04-2018 399

ಬೆಂಗಳೂರು: ಒಂದು ಕೆ.ಜಿ.ಅಪ್ಪಟ ಚಿನ್ನ ನೀಡುವುದಾಗಿ 15 ಲಕ್ಷ ರೂ ತರಲು ಹೇಳಿ ದರೋಡೆ ಮಾಡಿಸಿದ್ದ ಇಬ್ಬರು ಅಂತರ್ ರಾಜ್ಯ ಕಳ್ಳರನ್ನ ಆವಲಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆಂಧ್ರ ಮೂಲದ ವೆಂಕಟೇಶ್ ಹಾಗೂ ಚಂದ್ರ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 6 ಲಕ್ಷ 20 ಸಾವಿರ ಹಣ ಹಾಗೂ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ತಿಂಗಳ ಕಿತ್ತಗನೂರು ಬಿದರಹಳ್ಳಿಯ ತ್ಯಾಗರಾಜು ಎಂಬುವರ ಬಳಿಗೆ ಬಂದ ಆರೋಪಿಗಳು ನಮ್ಮ ಬಳಿ ಒಂದು ಕೆಜಿ ಚಿನ್ನಾಭರಣವಿದೆ, ಇದನ್ನ ತೆಗೆದುಕೊಂಡು ಬರಲಿದ್ದೇವೆ ಎಂದು ಹೇಳಿ 15 ಲಕ್ಷಕ್ಕೆ ವ್ಯಾಪಾರ ಕುದುರಿಸಿದ್ದರು.

ಅದರಂತೆ ತ್ಯಾಗರಾಜ್ 15 ಲಕ್ಷ ಹಣವನ್ನ ತೆಗೆದುಕೊಂಡು ಬಂದು ಆವಲಹಳ್ಳಿ ಬಳಿ ವೆಂಕಟೇಶ್‍ಗೆ ನೀಡಿದ್ದಾನೆ. ಬಳಿಕ ಹಣ ತೆಗೆದುಕೊಂಡ ಆರೋಪಿ ವೆಂಕಟೇಶ್ ಚಿನ್ನ ಮನೆಯಲ್ಲಿದೆ ಎಂದು  ಹೇಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಟಾಟಾ ಸುಮೋದಲ್ಲಿ ಬಂದ ದುಷ್ಕರ್ಮಿಗಳು ವೆಂಕಟೇಶ್‍ನನ್ನ ಹೊಡೆದ ರೀತಿ ನಟಿಸಿ ಆತನನ್ನು ಮತ್ತು ಹಣವನ್ನ ಕಸಿದು ಪರಾರಿಯಾಗಿದ್ದರು. ಈ ವೇಳೆ ಹಣ ಕಳೆದುಕೊಂಡ ತ್ಯಾಗರಾಜ್, ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ವಂಚನೆ ಮಾಡಿದ್ದ ವೆಂಕಟೇಶ್ ಹಾಗೂ ಚಂದ್ರನನ್ನ ಬಂಧಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Gold inter state ಕಾರ್ಯಾಚರಣೆ ಪರಾರಿ